ನೆಲಮಂಗಲ ಬಳಿ ನಿತ್ಯಾನಂದನ ಶಿಷ್ಯೆ ರಂಜಿತಾ ರಂಪಾಟ

Nityananda Disciples in Hit and Run Row
Highlights

  • ಬೈಕ್’ಗೆ ಗುದ್ದಿದ ನಿತ್ಯಾನಂದ ಶಿಷ್ಯರ ಕಾರು
  • ಗುದ್ದಿ ಪರಾರಿಯಾಗಲು ಯತ್ನಿಸಿದ್ದ ಕಾರನ್ನು ಅಡ್ಡಗಟ್ಟಿದ ಸಾರ್ವಜನಿಕರು

ಬೆಂಗಳೂರು: ನಿತ್ಯಾನಂದನ ಭಕ್ತರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅದೇನು ಆಶ್ರಮದಲ್ಲಿ ಧ್ಯಾನ ಮಾಡ್ತಾರೊ,  ಇಲ್ಲ ಕೋಪಾಟೋಪ ಪ್ರದರ್ಶಿಸೊ ವಿದ್ಯೆ ಕಲಿಸ್ತಾರೊ ದೇವ್ರೇ ಬಲ್ಲ. ನಿತ್ಯಾನಂದನ ಶಿಷ್ಯೆ ರಂಜಿತಾ ಮತ್ತು ಇತರರು ಮತ್ತೆ ಸುದ್ದಿಯಾಗಿದ್ದಾರೆ ನೋಡಿ.

ಮಧ್ಯಾಹ್ನ ಬೆಂಗಳೂರು ಹೊರವಲಯ ನೆಲಮಂಗಲದ ಜಿಂದಾಲ್ ಬಳಿ ಇವರಿದ್ದ ಫೋರ್ಡ್ ಕಾರ್ ಟೂ ವೀಲರ್’ಗೆ ಡಿಕ್ಕಿ ಹೊಡೆದಿದ್ದಾರೆ. ಬೈಕ್’ನಿಂದ ಕೆಳಗೆ ಬಿದ್ದ ಸವಾರ ನಾರಾಯಣ ಗೌಡ ಮತ್ತು ಲಕ್ಷ್ಮೀಕಾಂತ್ ರಕ್ತದ ಮಡುವಿನಲ್ಲಿ ಬಿದ್ದಿದ್ರೂ ಕಾರ್ ನಿಲ್ಲಿಸದೆ ಎಸ್ಕೇಪ್ ಆಗಿದ್ದಾರೆ.

ಇವ್ರ ದುರಹಂಕಾರ ನೋಡಿದ ಸಾರ್ವಜನಿಕರು ಕಾರ್ ಬೆನ್ನಟ್ಟಿದ್ದಾರೆ. ಪೀಣ್ಯ ಎಂಟನೇ ಮೈಲಿ ಬಳಿ ಕಾರ್ ತಡೆದು ಕೆಳಗಿಳಿಯುವಂತೆ ಸೂಚಿಸಿದ್ದಾರೆ. ಯಾವಾಗ ಮಾತಿಗೆ ಬಗ್ಗಲಿಲ್ಲವೋ ಕಾರ್ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ. ಅವಾಗ್ಲೇ ಗೊತ್ತಾಗಿದ್ದು ಕಾರ್’ನಲ್ಲಿ ರಂಜಿತಾ ಇದ್ದಾಳೆ ಎಂದು.

ನವೀನ್ ನಿತ್ಯಾನಂದ ಕಾರ್ ಡ್ರೈವ್ ಮಾಡ್ತಿದ್ದು, ಕಾರ್ ನಿಲ್ಲಿಸಿ ಗಾಯಾಳುಗಳ ನೆರವಿಗೆ ಬರುವಂತ ಸೌಜನ್ಯ ತೋರಿಸಿಲ್ಲ ನೋಡಿ ರಂಜಿತಾ. ಯಾವಾಗ ಕಾರ್ ಗ್ಲಾಸ್ ಹೊಡೆದ್ರೋ ರಂಜಿತಾ ಸ್ಥಳದಿಂದ ಎಸ್ಕೇಪ್ ಆಗಿದ್ಲು. ಉಳಿದ ನಿತ್ಯಾನಂದ ಶಿಷ್ಯರನ್ನು ಜನರೇ ಎಳೆದುಕೊಂಡು ನೆಲಮಂಗಲ ಟ್ರಾಫಿಕ್ ಪೊಲೀಸ್ ಠಾಣೆಗೆ ಬಂದಿದ್ದಾರೆ. ಇನ್ನೂ ಇದೇ ವೇಳೆ ಪ್ರಕರಣಕ್ಕೆ ಸಂಭಂದಿಸಿದ ಕಾರನ್ನು ಚಿತ್ರೀಕರಿಸುತ್ತಿದ್ದ ಮಾಧ್ಯಮ ಪ್ರತಿನಿದಿಗಳ ಮೇಲೆ, ನಿತ್ಯಾನಂದ ಶಿಷ್ಯರು ಹರಿಹಾಯ್ದು, ಫೋಟೋ ಕ್ಲಿಕ್ಕಿಸ್ಕೊಂಡು ಧಮ್ಕಿ ಹಾಕಿದ್ದಾರೆ.

ಸದ್ಯ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್ ಸವಾರರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಿತ್ಯಾನಂದ ಭಕ್ತರ ಪುಂಡಾಟ ಅದ್ಯಾವಾಗ ನಿಲ್ಲುತ್ತೆ ಅಂತಾ ಕಾದು ನೋಡಬೇಕಿದೆ.

loader