Asianet Suvarna News Asianet Suvarna News

ಜೆಡಿಯು ವಿಭಜನೆ?: ಬಿಜೆಪಿ ಜೊತೆ ಮೈತ್ರಿಗೆ ಶರದ್ ಯಾದವ್ ಬಣ ಅಸಮಾಧಾನ

ಮಹಾಘಟಬಂಧನ ತೊರೆದು ಎನ್ ಡಿಎ ಪಾಳೆಯಕ್ಕೆ ಜಿಗಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಡೆ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದಾರೆಂದು ಹೇಳ ಲಾಗಿರುವ ಜೆಡಿಯು ನಾಯಕ ಶರದ್ ಯಾದವ್ ಮುಂದಿನ ಹೆಜ್ಜೆ ಕುರಿತು ಅಳೆದೂ ತೂಗಿ ನೋಡುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.

Nitish Kumars Move Unfortunate Sharad Yadav Confirms He Is Not Happy

ನವದೆಹಲಿ(ಜು.31): ಮಹಾಘಟಬಂಧನ ತೊರೆದು ಎನ್ ಡಿಎ ಪಾಳೆಯಕ್ಕೆ ಜಿಗಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಡೆ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದಾರೆಂದು ಹೇಳ ಲಾಗಿರುವ ಜೆಡಿಯು ನಾಯಕ ಶರದ್ ಯಾದವ್ ಮುಂದಿನ ಹೆಜ್ಜೆ ಕುರಿತು ಅಳೆದೂ ತೂಗಿ ನೋಡುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.

ನಿತೀಶ್ ನಡೆಸಿದ ಕ್ಷಿಪ್ರಕ್ರಾಂತಿ ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಜತೆ ಶರದ್ ಮಾತುಕತೆ ನಡೆಸಿದ್ದರು. ಇದಾದ ತರುವಾಯ ಸಿಪಿಎಂ ಪ್ರಧಾನ ಕಾರ್ಯ ದರ್ಶಿ ಸೀತಾರಾಮ ಯೆಚೂರಿ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಜತೆಗೂ ಚರ್ಚೆ ನಡೆಸಿದ್ದಾರೆ. ಜೆಡಿಯು ಈಗ ಎನ್‌ಡಿಎ ಪಾಳೆಯಕ್ಕೆ ಸೇರಿರುವ ಹಿನ್ನೆಲೆಯಲ್ಲಿ ಕೇಂದ್ರ ಮಂತ್ರಿ ಸ್ಥಾನದ ಆರ್ ಬಂದಿದೆಯಾದರೂ ಅದನ್ನು ಯಾದವ್ ಒಪ್ಪಿಲ್ಲ ಎನ್ನಲಾಗಿದೆ

'ಲಾಲು ನನ್ನನ್ನು ಕ್ಷ ಮಿಸಿಬಿಡಿ' ರಾಜೀನಾಮೆಗೆ ಮುನ್ನ ನಿತೀಶ್ ಪಟನಾ:

ಆರ್‌ಜೆಡಿ- ಕಾಂಗ್ರೆಸ್ ಜತೆಗಿನ ಮೈತ್ರಿ ಯನ್ನು ಕಡಿದುಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಕರೆ ಮಾಡಿದ್ದರು. ‘ಲಾಲೂ ಜೀ ಮಹಾ ಘಟಬಂ‘ನವನ್ನು ಮುರಿದಿದ್ದಕ್ಕಾಗಿ ನನ್ನನ್ನು ಕ್ಷಮಿಸಿ ಬಿಡಿ, 20 ತಿಂಗಳು ಸರ್ಕಾರ ನಡೆಸಿದ ಬಳಿಕ ಇದನ್ನು ಮುಂದುವರೆಸಿಕೊಂಡು ಹೋಗುವುದು ನನ್ನಿಂದ ಆಗದು’ ಎಂದು ಕೋರಿಕೊಂಡಿದ್ದರು. ಈ ವೇಳೆ ನಿರ್ಧಾರವನ್ನು ಮರುಪರಿಶೀಲಿಸಿ ಎಂದು ಲಾಲು ನಿತೀಶ್‌ರನ್ನು ಕೋರಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

 

Follow Us:
Download App:
  • android
  • ios