ಪ್ರಧಾನಿ ಮೋದಿ ಹತ್ಯೆಗೆ ನಿತಿನ್ ಗಡ್ಕರಿ ಸ್ಕೆಚ್?ಜೆಎನ್ ಯು ವಿದ್ಯಾರ್ಥಿ ಹಕ್ಕುಗಳ ಕಾರ್ಯಕರ್ತೆ ಆರೋಪಶೆಹ್ಲಾ ರಶೀದ್ ಟ್ವಿಟ್ ಗೆ ನಿತಿನ್ ಗಡ್ಕರಿ ಕೆಂಡಾಮಂಡಲಗಡ್ಕರಿಗೆ ಇದೆಯಂತೆ ಆರ್ ಎಸ್ ಎಸ್ ಬೆಂಬಲ
ನವದೆಹಲಿ(ಜೂ.10): ಆರ್‌ಎಸ್‌ಎಸ್ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದಾರೆ ಎಂದು, ಜೆಎನ್‌ಯು ವಿದ್ಯಾರ್ಥಿ ಹಕ್ಕುಗಳ ಕಾರ್ಯಕರ್ತೆ ಶೆಹ್ಲಾ ರಶೀದ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಶೆಹ್ಲಾ ರಶೀದ್, ಮೋದಿ ಅವರನ್ನು ಕೊಲ್ಲಲು ಗಡ್ಕರಿ ಆರ್‌ಎಸ್‌ಎಸ್ ಜೊತೆ ಸೇರಿ ಯೋಜನೆ ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಮೋದಿ ಕೊಲೆಯನ್ನು ಮುಸ್ಲಿಮರು ಮತ್ತು ಕಮ್ಯುನಿಸ್ಟರ ತಲೆಗೆ ಕಟ್ಟಿ ರಾಜಕೀಯ ಲಾಭ ಮಾಡಿಕೊಳ್ಳಲು ಹುನ್ನಾರ ನಡೆದಿದೆ ಎಂದೂ ಶೆಹ್ಲಾ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಶೆಹ್ಲಾ ರಶೀದ್ ಟ್ವಿಟ್ ಗೆ ಕೆಂಡಾಮಂಡಲವಾಗಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಇಲ್ಲಸಲ್ಲದ ಆರೋಪ ಮಾಡುತ್ತಿರುವ ಶೆಹ್ಲಾ ರಶೀದ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇಂತಹ ಗಂಭೀರ ಆರೋಪ ಮಾಡಿರುವ ಶೆಹ್ಲಾ ವಿರುದ್ದ ಕಾನೂನು ಕ್ರಮಕ್ಕೆ ಚಿಂತನೆ ನಡೆಸಿರುವುದಾಗಿ ಗಡ್ಕರಿ ಟ್ವಿಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಯಿಸಿರುವ ರಶೀದ್, ವಿಶ್ವದ ದೊಡ್ಡ ಪಕ್ಷದ ನಾಯಕರು ವ್ಯಂಗ್ಯಭರಿತ ಮಾತಿನ ಬಗ್ಗೆ ಕಾರ್ಯಪ್ರವೃತ್ತರಾಗುತ್ತಾರೆ. ಆದರೆ, ತಳಬುಡವಿಲ್ಲದ ಮಾಧ್ಯಮ ವರದಿಯಿಂದ ಮುಗ್ಧ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ಹಾಗೂ ಆತನ ತಂದೆಯ ಮೇಲೆ ಹಲ್ಲೆಯಾದಾಗ ಧ್ವನಿ ಎತ್ತಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
