ಸುಷ್ಮಾಗೆ ಟ್ರೋಲ್ ಮಾಡುವ ಮುನ್ನ ಗಡ್ಕರಿ ಎಚ್ಚರಿಕೆ ಓದಿ!

Nitin Gadkari condemns Swaraj’s trolling on Twitter
Highlights

ಸುಷ್ಮಾ ಟ್ರೋಲಿಗರಿಗೆ ನಿತಿನ್ ಗಡ್ಕರಿ ಎಚ್ಚರಿಕೆ

ಪರಸ್ಪರ ಗೌರವ ಕೊಡುವುದನ್ನು ಕಲಿಯಿರಿ

ಟ್ರೋಲ್ ಮಾಡುವ ರೀತಿಗೆ ಸಚಿವರ ಆಕ್ರೋಶ
 

ನವದೆಹಲಿ(ಜು.3): ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸಾಮಾಜಿಕ ತಾಣದಲ್ಲಿ ಪದೇ ಪದೇ ಟ್ರೋಲ್ ಮಾಡಲಾಗುತ್ತಿದ್ದು, ಇದನ್ನು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಖಂಡಿಸಿದ್ದಾರೆ.

ಲಕ್ನೋದ ಅಂತರರ್ಧಮಿಯ ದಂಪತಿಯ ಪಾಸ್ ಪೋರ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ತಾಣದಲ್ಲಿ ಸುಷ್ಮಾ ಸ್ವರಾಜ್ ಅವರ ವಿರುದ್ಧ ಬಳಸಿದ್ದ ಭಾಷೆಯನ್ನು ನಿತಿನ್ ಗಡ್ಕರಿ ಖಂಡಿಸಿದ್ದಾರೆ. ಸುಷ್ಮಾ ದೇಶದಲ್ಲಿ ಇಲ್ಲದ ಸಂದರ್ಭದಲ್ಲಿ ಟ್ರೋಲ್ ಮಾಡುವುದು ವಿಷಾದಕರ ಮತ್ತು ಆಕ್ಷೇಪ ವ್ಯಕ್ತಪಡಿಸುತ್ತಿರುವ ರೀತಿಯೂ ಸರಿ ಇಲ್ಲ ಎಂದಿದ್ದಾರೆ.

ನಾವು ಪರಸ್ಪರ ಗೌರವ ನೀಡಬೇಕು. ಪರಸ್ಪರ ನಿಂದಿಸುವ ಕೆಲಸ ಮಾಡಬಾರದು ಎಂದು ಸಚಿವರು ಟ್ವೀಟಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವಾರ ಮುಸ್ಲಿಂ ಸಮುದಾಯವನ್ನು ತೃಪ್ತಿಪಡಿಸುವ ಕೆಲಸವನ್ನು ನಿಲ್ಲಿಸುವಂತೆ ಆಕೆಗೆ ಬುದ್ದಿವಾದ ಹೇಳಿ ಎಂದು  ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ ಅವರಿಗೆ ಟ್ವಿಟ್ ಸಲಹೆ ನೀಡಿ ಟ್ರೋಲ್ ಮಾಡಲಾಗಿತ್ತು.

 

ಈ ಸುದ್ದಿಯನ್ನೂ ಓದಿ- ಮುಸ್ಲಿಂರ ಓಲೈಕೆ ಆರೋಪ, ಮತ್ತೆ ಟ್ರೋಲಾದ ಸುಷ್ಮಾ!

loader