ಮುಸ್ಲಿಂರ ಓಲೈಕೆ ಆರೋಪ, ಮತ್ತೆ ಟ್ರೋಲಾದ ಸುಷ್ಮಾ!

Sushma Swaraj trolled on Twitter again, accused of Muslim appeasement
Highlights

ಮುಸ್ಲಿಂರ ಓಲೈಕೆ ಆರೋಪ, ಮತ್ತೆ ಟ್ರೋಲಾದ ಸುಷ್ಮಾ

ಸುಷ್ಮಾಗೆ ಹೊಡೆಯುವಂತೆ ಪತಿಗೆ ಸಲಹೆ ನೀಡಿದ ಭೂಪ

ನೋವಿನಿಂದ ಟ್ವಿಟ್ ಹಂಚಿಕೊಂಡ ಸುಷ್ಮಾ ಸ್ವರಾಜ್
 

ನವದೆಹಲಿ(ಜೂ.30): ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟರ್ ನಲ್ಲಿ ಮತ್ತೆ ಟ್ರೋಲ್ ಗೆ ತುತ್ತಾಗಿದ್ದಾರೆ. ಮುಸ್ಲಿಂರ ಓಲೈಕೆ  ಆರೋಪಕ್ಕೆ ಮತ್ತೊಮ್ಮೆ ಗುರಿಯಾಗಿರುವ ಸುಷ್ಮಾ ಅವರಿಗೆ, ಮುಸ್ಲಿಂ ಸಮುದಾಯವನ್ನು ತೃಪ್ತಿಪಡಿಸುವ ಕೆಲಸವನ್ನು ನಿಲ್ಲಿಸುವಂತೆ ಕೆಲವರು ಸಲಹೆ ನೀಡಿದ್ದಾರೆ.

ಹಿಂದೂ ಮುಸ್ಲಿಂ ದಂಪತಿಗೆ ಅವಮಾನ ಮಾಡಿದ್ದ  ಲಕ್ನೋ  ಪಾಸ್ ಪೋರ್ಟ್ ಸೇವಾ ಕೇಂದ್ರದ ಅಧಿಕಾರಿಯನ್ನು ವರ್ಗಾವಣೆ ಮಾಡಿ ದಂಪತಿಗೆ ನೆರವಾದುದ್ದಕ್ಕೆ ಸುಷ್ಮಾ ಸ್ವರಾಜ್ ಮೇಲೆ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸುಷ್ಮಾ ಸ್ವರಾಜ್ ಸ್ವದೇಶಕ್ಕೆ ಮರಳಿದ ಬಳಿಕ ನೀವು ಅವರಿಗೆ ಹೊಡೆದು ಬುದ್ದಿವಾದ ಹೇಳಿ ಎಂದು ಓರ್ವ ವ್ಯಕ್ತಿ ಸುಷ್ಮಾ ಪತಿಗೆ ಸಲಹೆ ನೀಡಿ ಟ್ವಿಟ್ ಮಾಡಿದ್ದಾನೆ. ಇದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಸುಷ್ಮಾ, ತುಂಬಾ ನೋವಿನಿಂದ ಈ ಸಂದೇಶಗಳನ್ನು ಲೈಕ್ ಮಾಡಿ ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. 

 ಜೂನ್ 17 ರಿಂದ 23ರವರೆಗೆ ನಾನು ದೇಶದಲ್ಲಿರಲಿಲ್ಲ. ನಾನು ಗೈರಾಗಿದ್ದಾಗ ಏನಾಗಿದೆಯೋ ನನಗೆ ತಿಳಿದಿಲ್ಲ. ಆದಾಗ್ಯೂ, ಕೆಲವು ಟ್ವೀಟ್ ಗಳ ಮೂಲಕ ನನ್ನನ್ನು ಗೌರವಿಸಲಾಗಿದೆ. ಅವುಗಳನ್ನು ನಿಮ್ಮ ಜತೆ ಹಂಚಿಕೊಳ್ಳುತ್ತೇನೆ. ಅದಕ್ಕಾಗಿ ಅವುಗಳನ್ನು ಲೈಕ್ ಮಾಡಿದ್ದೇನೆ ಎಂದು ನೋವಿನಿಂದ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ದಂಪತಿ ಹೇಳುವ ಪ್ರಕಾರ  ಪಾಸ್ ಪೋರ್ಟ್ ಸೇವಾ ಕೇಂದ್ರದ  ಅಧಿಕಾರಿ ಮಿಶ್ರಾ ,  ಮುಸ್ಲಿಂ  ಪತಿಯನ್ನು  ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಹಾಗೂ ಹಿಂದೂ ಯುವತಿ  ಮುಸ್ಲಿಂರನ್ನು ವಿವಾಹವಾಗದ್ದಕ್ಕೆ ನಿಂದಿಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು.

ಈ ವಿವಾದದಲ್ಲಿ  ವಿದೇಶಾಂಗ ಸಚಿವಾಲಯ  ಮಿಶ್ರಾ ವಿರುದ್ಧ ಕ್ರಮ ಕೈಗೊಂಡಿದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಸುಷ್ಮಾ ಸ್ವರಾಜ್ ತೀವ್ರ ಟೀಕೆಗೆ ಗುರಿಯಾಗಿದ್ದರು. ವಿದೇಶಾಂಗ ಸಚಿವರನ್ನು ನಿಂದಿಸಿರುವಂತಹ ಕೆಲ ಟ್ವಿಟ್‌ಗಳನ್ನು ಸಚಿವರು ಮರು ಟ್ವೀಟ್ ಮಾಡಿದ್ದಾರೆ.

loader