‘‘ಅಮಾನ್ಯ ನೀತಿಯಿಂದಾಗಿ ಆರ್ಥಿಕತೆಯ ಪ್ರಗತಿಯ ದರದಲ್ಲಿ ಕುಂಠಿತವಾಗಬಹುದು. ಆದರೆ, ನಂತರದ ದಿನಗಳಲ್ಲಿ ಆರ್ಥಿಕತೆ ಚೇತರಿಸಿಕೊಳ್ಳಲಿದೆ’’- ಅರವಿಂದ ಪನಗಾರಿಯಾ

ನವದೆಹಲಿ(ಜ.03):ನೋಟುಗಳ ಅಮಾನ್ಯವು ಪ್ರಸಕ್ತ ವಿತ್ತೀಯ ವರ್ಷದ ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಆರ್ಥಿಕತೆಯ ಮೇಲೆ ಸ್ವಲ್ಪಮಟ್ಟಿಗೆ ಪರಿಣಾಮ ಬೀರಲಿದೆ. ಆದರೆ, 2017-18ರ ಹಣಕಾಸು ವರ್ಷದಲ್ಲಿ ಈ ನಷ್ಟ ತುಂಬಲು ಸಾಧ್ಯವಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗಾರಿಯಾ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಎನ್‌'ಬಿಸಿ-ಟಿವಿ18 ಜೊತೆ ಮಾತನಾಡಿರುವ ಪನಗಾರಿಯಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘‘ಅಮಾನ್ಯ ನೀತಿಯಿಂದಾಗಿ ಆರ್ಥಿಕತೆಯ ಪ್ರಗತಿಯ ದರದಲ್ಲಿ ಕುಂಠಿತವಾಗಬಹುದು. ಆದರೆ, ನಂತರದ ದಿನಗಳಲ್ಲಿ ಆರ್ಥಿಕತೆ ಚೇತರಿಸಿಕೊಳ್ಳಲಿದೆ,’’ ಎಂದಿದ್ದಾರೆ.

ಸರ್ಕಾರವು ನೋಟು ಅಮಾನ್ಯದ ಬಳಿಕ ಸಂಗ್ರಹವಾದ ಹಣದಲ್ಲಿ ಏನಾದರೂ ದೊಡ್ಡ ಉತ್ತೇಜನಾ ಮೊತ್ತ ಘೋಷಿಸಲಿದೆಯೇ ಎಂಬ ಪ್ರಶ್ನೆಗೆ ಪನಗಾರಿಯಾ, ‘‘ಅದನ್ನು ಈಗಲೇ ಊಹಿಸುವುದು ಕಷ್ಟ,’’ ಎಂದು ಹೇಳಿದ್ದಾರೆ.