ಮೈಸೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಂಡ ಅವರು, 'ಬಿಹಾರ ಬಿಟ್ಟರೆ ಕರ್ನಾಟಕ ದೇಶದಲ್ಲೇ 2ನೇ ಗೂಂಡಾರಾಜ್ಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.ಕೊಲೆ,ಸುಲಿಗೆ ಪ್ರಮಾಣ ಹೆಚ್ಚಾಗಿದೆ. ಕಾನೂನು ಸುವ್ಯಸ್ಥೆಗಾಗಿ ರಾಜ್ಯ ಬಿಜೆಪಿಯ ಹೋರಾಟ ಮುಂದುವರಿಯಬೇಕು' ಎಂದು ಹೇಳಿದರು.

ಮೈಸೂರು(ಮೇ.07): ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಂಡ ಅವರು, 'ಬಿಹಾರ ಬಿಟ್ಟರೆ ಕರ್ನಾಟಕ ದೇಶದಲ್ಲೇ 2ನೇ ಗೂಂಡಾರಾಜ್ಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.ಕೊಲೆ,ಸುಲಿಗೆ ಪ್ರಮಾಣ ಹೆಚ್ಚಾಗಿದೆ. ಕಾನೂನು ಸುವ್ಯಸ್ಥೆಗಾಗಿ ರಾಜ್ಯ ಬಿಜೆಪಿಯ ಹೋರಾಟ ಮುಂದುವರಿಯಬೇಕು' ಎಂದು ಹೇಳಿದರು.

ಅಧಿಕಾರ, ರಾಜಕಾರಣ ಸಮಾಜ ಪರಿವರ್ತನೆಯತ್ತ ಇರಬೇಕು. ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು.ಮುಂದಿನ ತಿಂಗಳಿಂದ 3 ದಿನ ಬೆಂಗಳೂರಿನಲ್ಲಿಯೇ ಇರುತ್ತೇನೆ.ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿಯನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು' ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಭಿನ್ನಮತದ ಬಗ್ಗೆಯೂ ಸಚಿವೆ ಪ್ರಸ್ತಾಪಿಸಿದರು