ನ್ಯೂಯಾರ್ಕ್ ಹೋಟೆಲ್‌ನಲ್ಲಿ ನೀರವ್‌ ಮೋದಿ ಕುಟುಂಬ?

Nirav Modi staying in a Five star Hotel in New York
Highlights

11400 ಕೋಟಿ ರು. ವಂಚನೆ ಪ್ರಕರಣದ ಪ್ರಮುಖ ಆರೋಪಿ ನೀರವ್‌ ಮೋದಿ ಮತ್ತು ಆತನ ಕುಟುಂಬ ಸದಸ್ಯರು ಅಮೆರಿಕದ ನ್ಯೂಯಾರ್ಕ್ ಐಷಾರಾಮಿ ಹೋಟೆಲ್‌ ಒಂದರಲ್ಲಿ ಇದ್ದಾರೆ ಎನ್ನಲಾಗಿದೆ.

ನವದೆಹಲಿ: 11400 ಕೋಟಿ ರು. ವಂಚನೆ ಪ್ರಕರಣದ ಪ್ರಮುಖ ಆರೋಪಿ ನೀರವ್‌ ಮೋದಿ ಮತ್ತು ಆತನ ಕುಟುಂಬ ಸದಸ್ಯರು ಅಮೆರಿಕದ ನ್ಯೂಯಾರ್ಕ್ ಐಷಾರಾಮಿ ಹೋಟೆಲ್‌ ಒಂದರಲ್ಲಿ ಇದ್ದಾರೆ ಎನ್ನಲಾಗಿದೆ.

ನ್ಯೂಯಾರ್ಕ್ನ ಮ್ಯಾನ್‌ಹಟನ್‌ ಪ್ರದೇಶದಲ್ಲಿರುವ ಜೆಡಬ್ಲ್ಯುಯು ಮ್ಯಾರಿಯಟ್ಸ್‌ ಎಸ್ಸೆಕ್ಸ್‌ ಹೌಸ್‌ ಹೋಟೆಲ್‌ನ 36ನೇ ಮಹಡಿಯ ಬೃಹತ್‌ ಅಪಾರ್ಟ್‌ಮೆಂಟ್‌ನಲ್ಲಿ ತಂಗಿದ್ದಾರೆ ಎಂದು ಹಲವು ಖಾಸಗಿ ಸುದ್ದಿವಾಹಿನಿಗಳು ವರದಿ ಮಾಡಿವೆ.

ಕಳೆದ ಜ.1ರಂದೇ ನೀರವ್‌ ಭಾರತ ಬಿಟ್ಟು ಪರಾರಿಯಾಗಿದ್ದರು. ಆದರೆ ಎರಡು ದಿನಗಳ ಹಿಂದಷ್ಟೇ ಅವರ ಹಗರಣ ಬೆಳಕಿಗೆ ಬಂದಿತ್ತು. ಈ ಹಗರಣ ಬೆಳಕಿಗೆ ಬಂದ ಮೇಲೆ ನೀರವ್‌ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಸಾಕಷ್ಟುಚಲನವಲನ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

loader