ಮುಂಬೈ[ಡಿ.02]: ಭಾರತಕ್ಕೆ ಬಂದರೆ ನನ್ನನ್ನು ಬಡಿದು ಹತ್ಯೆ ಮಾಡುವ ಸಾಧ್ಯತೆ ಇರುವ ಕಾರಣ, ತಾವು ವಿಚಾರಣೆಗಾಗಿ ಭಾರತಕ್ಕೆ ಆಗಮಿಸುವುಉದು ಸಾಧ್ಯವಿಲ್ಲ ಎಂದು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 14 ಸಾವಿರ ಕೋಟಿ ರು. ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ವಜ್ರೋದ್ಯಮಿ ನೀರವ್‌ ಮೋದಿ ವಾದಿಸಿದ್ದಾರೆ.

ಇದನ್ನೂ ಓದಿ: ನೀರವ್ ಮೋದಿ ಎಲ್ಲಿದ್ದಾರೆ ಗೊತ್ತಾ?

ಜೊತೆಗೆ ಈಗಾಗಲೇ ತಮ್ಮನ್ನು ‘ರಾವಣ’ನ ರೀತಿ ಬಿಂಬಿಸಲಾಗುತ್ತಿದೆ. ಇಂಥ ಸಂದರ್ಭದಲ್ಲಿ ತಾವು ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ನೀರವ್‌ ಮೋದಿ ತಮ್ಮ ವಕೀಲರ ಮೂಲಕ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ, ಈ ವಾದವನ್ನು ಜಾರಿ ನಿರ್ದೇಶನಾಲಯ ಅಲ್ಲಗೆಳೆದಿದೆ. ಒಂದು ವೇಳೆ ಅವರು ಭಾರತದಲ್ಲಿ ಭದ್ರತೆ ಭೀತಿ ಎದುರಿಸುತ್ತಿದ್ದರೆ, ಈ ಬಗ್ಗೆ ನೀಮೋ ಅವರು ಪೊಲೀಸರಿಗೆ ದೂರು ಸಲ್ಲಿಸಬಹುದಿತ್ತು ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಇದನ್ನೂ ಓದಿ: ಮೋದಿ ಇಲ್ಲೇ ಅವ್ರೆ ಎಂದ ಇಂಗ್ಲೆಂಡ್: ಕಳ್ಸಿಬಿಡಿ ಎಂದ ಸಿಬಿಐ!

ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ನೀರವ್‌ ಮೋದಿ ಅವರನ್ನು ದೇಶಭ್ರಷ್ಟಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಬೇಕು ಎಂದು ಇ.ಡಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಕೋರ್ಟ್‌ ಎದುರು ನೀಮೋ ವಕೀಲ ವಿಜಯ್‌ ಅಗರ್ವಾಲ್‌ ಅವರು ಶನಿವಾರ ವಾದ ಮಂಡಿಸಿದರು. ಈ ಹಿಂದೆ, ಮೆಹುಲ್‌ ಚೋಕ್ಸಿಯೂ ತಾವು ಭಾರತಕ್ಕೆ ಬಂದು ವಿಚಾರಣೆಯಲ್ಲಿ ಭಾಗಿಯಾಗದೇ ಇರಲು ಜೀವ ಭಯವೇ ಕಾರಣ ಎಂದು ಹೇಳಿದ್ದರು.