ಮುಜಫ್ಫರ್‌ಪುರ[ಜೂ.15]: ಬಿಹಾರದಲ್ಲಿ ಮಿದುಳಿನ ಉರಿಯೂತ (ಅಕ್ಯೂಟ್‌ ಎನ್‌ಸೆಫಲಿಟೀಸ್‌ ಸಿಂಡ್ರೋಮ್‌) ಕಾಯಿಲೆಗೆ ಸಾವನ್ನಪ್ಪಿದ ಮಕ್ಕಳ ಸಂಖ್ಯೆ 63ಕ್ಕೆ ಏರಿಕೆಯಾಗಿದೆ.

ಕಳೆದೊಂದು ತಿಂಗಳಿನಿಂದ ರಾಜ್ಯದ ವಿವಿಧ ಭಾಗಗಳನ್ನು ಕಾಡುತ್ತಿರುವ ಸಮಸ್ಯೆ ನಿವಾರಿಸಲು ತಜ್ಞ ವೈದ್ಯರ ತಂಡ ಅವಿರತವಾಗಿ ಶ್ರಮಿಸುತ್ತಿದೆ ಎಂದು ಬಿಹಾರ ಆರೋಗ್ಯ ಸಚಿವ ಮಂಗಲ್‌ ಪಾಂಡೆ ಹೇಳಿದ್ದಾರೆ. 63 ಮಕ್ಕಳ ಪೈಕಿ 47 ಮಂದಿ ಶ್ರೀಕೃಷ್ಣ ಮೆಡಿಕಲ್‌ ಕಾಲೇಜ್‌ ಮತ್ತು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಉಳಿದ 10 ಮಂದಿ ಕೇಜ್ರಿವಾಲ್‌ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

ಮಿದುಳಿನ ಊರಿಯೂತ ವೈರಾಣು ಸೋಂಕಿನಿಂದ ಹರಡುವ ಕಾಯಿಲೆಯಾಗಿದೆ.