ಅಮೆರಿಕ ರಾಯಭಾರಿ  ಭಾರತೀಯ ಮೂಲದ ನಿಕ್ಕಿ ಹ್ಯಾಲೆ,  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಗಾಳಿ ಸುದ್ದಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ವಿಚಾರಗಳನ್ನು ಹರಡುವುದು ಅತ್ಯಂತ ದೊಡ್ಡ ತಪ್ಪು, ಅಸಹ್ಯಕರವಾದ ವಿಚಾರವಾಗಿದೆ ಎಂದು ಹೇಳಿದ್ದಾರೆ.  

ವಾಷಿಂಗ್ಟನ್ : ಅಮೆರಿಕ ರಾಯಭಾರಿ ಭಾರತೀಯ ಮೂಲದ ನಿಕ್ಕಿ ಹ್ಯಾಲೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಗಾಳಿ ಸುದ್ದಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ವಿಚಾರಗಳನ್ನು ಹರಡುವುದು ಅತ್ಯಂತ ದೊಡ್ಡ ತಪ್ಪು, ಅಸಹ್ಯಕರವಾದ ವಿಚಾರವಾಗಿದೆ ಎಂದು ಹೇಳಿದ್ದಾರೆ.

ತಾವು ಬರೆದ ಪುಸ್ತಕದ ಬಗ್ಗೆ ನಡೆದ ಸಂದರ್ಶನವೊಂದರಲ್ಲಿ ಮೈಕೆಲ್ ವೂಲ್ಫ್ ಎನ್ನುವವರು ಹ್ಯಾಲೇ ಹಾಗೂ ಟ್ರಂಪ್ ಬಗ್ಗೆ ಪ್ರಸ್ತಾಪಿಸಿದ್ದರು. ಅವರ ಪುಸ್ತಕ ಫೈರ್ ಅಂಡ್ ಫ್ಯೂರಿಯಲ್ಲಿ ಹ್ಯಾಲೆ ಬಗ್ಗೆ ಪ್ರಸ್ತಾಪಿಸಿ ಟ್ರಂಪ್ ಆಡಳಿತದಲ್ಲಿ ಉನ್ನತ ಸ್ಥಾನವನ್ನು ಹೊಂದಿರುವ ಮಹಿಳೆ. ಅಲ್ಲದೇ ಆಕೆ ಟ್ರಂಪ್ ಜೊತೆ ಖಾಸಗಿಯಾಗಿ ಹೆಚ್ಚು ಸಮಯ ಕಳೆಯುತ್ತಾರೆ ಎಂದೂ ಬರೆದಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಹ್ಯಾಲೆ ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ ಎಂದಿದ್ದಾರೆ. ಅಲ್ಲದೇ ಈ ಬಗ್ಗೆ ವೂಲ್ಫ್’ಗೆ ಪ್ರತಿಕ್ರಿಯೆ ನೀಡಿ, ನಾನು ಟ್ರಂಪ್ ಜೊತೆ ಇರುವಾಗ ಅನೇಕರು ನಮ್ಮೊಂದಿಗೆ ಇರುತ್ತಾರೆ. ಕೇವಲ ರಾಜಕೀಯ ವಿಚಾರದ ಚರ್ಚೆಯಾಗುತ್ತವೆಯೇ ಹೊರತು ನಮ್ಮ ನಡುವೆ ಇನ್ಯಾವುದೇ ಖಾಸಗಿ ವಿಚಾರಗಳಲ್ಲ ಎಂದಿದ್ದಾರೆ.