ದೇವೇಗೌಡರ ಕುಟುಂಬದವರೆ ತುಮಕೂರಿನಿಂದ ಸ್ಪರ್ಧಿಸ್ತಾರಂತೆ!

Nikhil Kumaraswamy is the JDS candidate of Tumkur Parliamentary constituency: says C. Chennigappa
Highlights

2019ರ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಕಾವು ಆರಂಭವಾದಂತಿದೆ.  ಸದ್ಯದ ಬ್ರೇಕಿಂಗ್ ಸುದ್ದಿ ಏನಪ್ಪಾ ಅಂದ್ರೆ ತುಮಕೂರು ಲೋಸಭಾ ಕ್ಷೇತ್ರದಿಂದ  ದೇವೇಗೌಡರ ಕುಟುಂಬದವರೆ ಸ್ಪರ್ಧೆ ಮಾಡುತ್ತಾರಂತೆ.. ಏನಿದು ಸುದ್ದಿ ಮುಂದೆ ಓದಿ..

 

ತುಮಕೂರು[ಜು.2]  ಲೋಕಸಭೆ ಚುನಾವಣೆಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ  ಪುತ್ರ, ನಟ ನಿಖಿಲ್ ಕುಮಾರಸ್ವಾಮಿ  ಅವರು ಸ್ಪರ್ಧಿಸಲಿದ್ದಾರೆ. ಮಾಜಿ ಸಚಿವ ತುಮಕೂರು ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಚೆನ್ನಿಗಪ್ಪ ನಿಖಿಲ್ ಸ್ಪರ್ಧೆ ಬಗ್ಗೆ ಮಾತನಾಡಿದ್ದಾರೆ.

ನಿಖಿಲ್ ಗೌಡ ಸ್ಪರ್ಧೆಗೆ ಆಹ್ವಾನಿಸಿದ್ದೀವಿ. ಭವಾನಿ ರೇವಣ್ಣ ಬಂದರೂ ಸಹ ನಮ್ಮ ಅಭ್ಯಂತರವಿಲ್ಲ, ಅಂತಿಮವಾಗಿ ಲೋಕಸಭಾ ಕ್ಷೇತ್ರದಿಂದ ಯಾರು ಸ್ಪರ್ಧೆ ಮಾಡುವುದು ಎನ್ನುವುದನ್ನು ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು. ಮೈತ್ರಿ ಸರ್ಕಾರ ಐದು ವರ್ಷ ಪೂರೈಸುತ್ತದೆ. ಮಾಜಿ ಸಿಎಂ ಸಿದ್ದರಾಮಯ್ಯರ ಮಾತು ಮಾತ್ರ ಸ್ವಲ್ಪ ಖಡಕ್. ಆದರೆ ಅವರ ಮನಸ್ಸು ಹೂವಿನಂತೆ ಕೋಮಲ ಎಂದು ಸಿದ್ದು ಪರ ಬ್ಯಾಟಿಂಗ್ ಮಾಡಿದರು.

ಸಾಲ ಮನ್ನಾ ಕತೆ ಎಲ್ಲಿಗೆ ಬಂತು?

ಇದೇ ವೇಳೆ ಸಿಎಂ ಕುಮಾರಸ್ವಾಮಿ ಸ್ವಭಾವ ವರ್ಣಿಸಿದ ಚೆನ್ನಿಗಪ್ಪ "ಕುಮಾರಣ್ಣ ಕೊಟ್ಟರೆ ವರ, ಇಟ್ಟರೆ ಶಾಪ' ಇದ್ದಹಾಗೆ ಎಂದರು. ಕುಮಾರಸ್ವಾಮಿ ಎಲ್ಲಾ ಪಕ್ಷದವರೊಂದಿಗೂ ಉತ್ತಮ ಸಂಬಂಧ ಇಟ್ಟುಕೊಂಡು ಸೌಜನ್ಯದಿಂದ ನಡೆದುಕೊಳ್ಳುತ್ತಾರೆ ಎಂದರು.

loader