ತಂದೆಯನ್ನು ಬಿಎಂಡಬ್ಲ್ಯೂ ಕಾರಿನಾಲ್ಲಿಟ್ಟು ಸಮಾಧಿತಂದೆಗೆ ಕೊಟ್ಟ ಮಾತು ಉಳಿಸಿಕೊಂಡ ಮಗತಂದೆ ಸ್ವರ್ಗಕ್ಕೆ ಹೋಗಲು ನೆರವಾಗಲು ನ್ಯಾವಿಗೇಷನ್ ಸಿಸ್ಟಮ್

ಇಹಿಹಾಲ(ಜೂ.13): ಈತನಿಗೆ ತನ್ನ ತಂದೆ ಮೇಲೆ ಅದೆಷ್ಟು ಪ್ರೀತಿ ನೋಡಿ. ತಂದೆ ನಿಧನರಾದ ಬಳಿಕ ಅವರನ್ನು ಶವ ಪೆಟ್ಟಿಗೆಗೆ ಬದಲು ಹೊಚ್ಚ ಹೊಸ ಬಿಎಂಡಬ್ಲ್ಯೂ ಕಾರಿನಾಲ್ಲಿಟ್ಟು ಸಮಾಧಿ ಮಾಡುವ ಮೂಲಕ ಗೌರವ ಸೂಚಿಸಿದ್ದಾನೆ.

ನೈಜೀರಿಯಾದ ಅನಂಬ್ರಾ ರಾಜ್ಯದ ಇಹಿಯಾಲಾದಲ್ಲಿ ಈ ಘಟನೆ ನಡೆದಿದ್ದು, ಅಜುಬುಕ್ ಎಂಬುವವರು ತಮ್ಮ ತಂದೆಯನ್ನು ಇತ್ತೀಚಿಗೆ ಕಳೆದುಕೊಂಡಿದ್ದರು. ಬದುಕಿದ್ದಾಗ ಹೊಸ ಬಿಎಂಡಬ್ಲ್ಯೂ ಕಾರು ಕೊಡಿಸುವುದಾಗಿ ತಂದೆಗೆ ಅಜುಬುಕ್ ಮಾತು ನೀಡಿದ್ದನಂತೆ. ಆದರೆ ಅವರು ಬದುಕಿದ್ದಾಗ ತನ್ನ ಮಾತು ಈಡೇರಿಸಕೊಳ್ಳಲು ಆತನಿಗೆ ಸಾಧ್ಯವಾಗಲಿಲ್ಲ. 

ಕೊನೆಗೆ ತಂದೆ ಸಾವನ್ನಪ್ಪಿದಾಗ ಅವರ ಕಡೆಯಾಸೆ ಎನ್ನುವಂತೆ ಅಂತಿಮ ಯಾತ್ರೆಗೆ ಮುನ್ನ ಸುಮಾರು 60 ಲಕ್ಷ ರೂ. ಬೆಲೆ ಬಾಳುವ ಬಿಎಂಡಬ್ಲ್ಯು ಕಾರನ್ನು ಖರೀದಿಸಿದ್ದು ಅದರ ಸಮೇತ ತಮ್ಮ ತಂದೆಯನ್ನು ಸಮಾಧಿ ಮಾಡಿದ್ದಾನೆ.

ಇಷ್ಟೇ ಅಲ್ಲದೆ ತಂದೆ ಕಾರಿನಲ್ಲೇ ಸ್ವರ್ಗಕ್ಕೆ ಹೋಗಲಿ ಎಂದು ಕಾರಿಗೆ ಸ್ಯಾಟಲೈಟ್ ನ್ಯಾವಿಗೇಷನ್ ಸಿಸ್ಟಮ್ ಸಹ ಅಳವಡಿಸಿದ್ದಾನೆ ಅಜುಬುಕ್. ಸುಮಾರು ಆರು ಅಡಿಗಳ ಆಳದ ಕಂದಕ ತೋಡಿ ಅದರಲ್ಲಿ ತಂದೆ ಶವವನ್ನು ಕಾರಿನ ಸಮೇತ ಮಣ್ಣು ಮಾಡಲಾಗಿದೆ.

Scroll to load tweet…

ಅಜುಬುಕ್ ತನ್ನ ತಂದೆಗೆ ಮಾಡಿದ್ದ ಈ ವಿಶಿಷ್ಟ ಅಂತ್ಯ ಸಂಸ್ಕಾರದ ಕುರಿತಂತೆ ಸಾಮಾಜಿಕ ತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಕಾರನ್ನು ಸಮಾಧಿಯಲ್ಲಿಡುವುದರಿಂದ ಏನೂ ಪ್ರಯೋಜನವಾಗದು, ಸಮಾಧಿಯೊಳಗೆ ಕಾರು ಹೆಚ್ಚು ಸಮಯ ಬಾಳುವುದಿಲ್ಲ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.