ನೈಜಿರಿಯಾ (ಡಿ. 04): ವಯೋವೃದ್ಧರಾಗಿರುವ ಖ್ಯಾತನಾಮರು ಸಾವನ್ನಪ್ಪಿದ್ದಾರೆ ಎಂದು ಆಗಾಗ್ಗೆ ಅಲ್ಲಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ನೈಜೀರಿಯಾದಲ್ಲಿ ಈ ವಿಷಯ ಹಂತ ತಲುಪಿದೆ ಎಂದರೆ, ಸತ್ತು ಹೋಗಿದ್ದಾರೆ ಎಂದು ಹೇಳಲಾದ ದೇಶದ ಅಧ್ಯಕ್ಷರೇ, ಟೀವಿ ಮುಂದೆ ಬಂದು, ಇಲ್ಲ ನಾನು ಸತ್ತಿಲ್ಲ ಎಂದು ಸ್ಪಷ್ಟನೆ ನೀಡಬೇಕಾಗಿ ಬಂದಿದೆ.

ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಮಹಮ್ಮದ್‌ ಬುಹಾರಿ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಬಹಳ ದಿನಗಳಿಂದ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಅಧ್ಯಕ್ಷರು ಸಾವಿಗೀಡಾಗಿದ್ದಾರೆ. ಅವರಂತೆಯೇ ಕಾಣುವ ಇನ್ನೊಬ್ಬ ವ್ಯಕ್ತಿಯನ್ನು ತೋರಿಸಲಾಗುತ್ತಿದೆ ಎಂಬ ಗಾಳಿ ಸುದ್ದಿ ನೈಜೀರಿಯಾದೆಲ್ಲೆಡೆ ಹಬ್ಬಿತ್ತು. ಹೀಗಾಗಿ ಸೋಮವಾರ ಟೀವಿ ಮುಂದೆ ಬುಹಾರಿ ತಾವಿನ್ನು ಬದುಕಿರುವುದನ್ನು ಖಚಿತಪಡಿಸಿದ್ದಾರೆ.