ಕಾಸರಗೊಡು[ಏ. 28] ಶ್ರೀಲಂಕಾದ ಬಾಂಬ್ ದಾಳಿಗೆ ಸಂಬಂಧಿಸಿ ರಾಷ್ಟ್ರೀಯ ಭದ್ರಾತಾ ದಳ (ಎನ್ಐಎ) ಕೇರಳದ ಕಾಸರಗೋಡು ಸೇರಿ ಹಲವು ಕಡೆಗಳಲ್ಲಿ ದಾಳಿ ನಡೆಸಿ ಓರ್ವ ಯುವಕನನ್ನು ವಶಕ್ಕೆ ಪಡೆದಿದೆ.

ಪಾಲಕ್ಕಾಡ್ ಜಿಲ್ಲೆ  ಕೈಲಂಗಾಡ್ ನ ನಿವಾಸಿ ರಿಯಾಜ್ ಅಬೂಬಕರ್ (28) ನನ್ನು ಎನ್ಐಎ ವಶಕ್ಕೆ ಪಡೆದು  ವಿಚಾರಣೆಗಾಗಿ ಆತನನ್ನು ಎರ್ನಾಕುಳಂ ಗೆ ಕರೆದೊಯ್ಯಲಾಗಿದೆ.
ಎನ್ಐಎ ಸಿಬ್ಬಂದಿ ಮೂರು ಗಂಟೆಗಳ ಕಾಲ ರಿಯಾಜ್ ಮನೆಯಲ್ಲಿ ಹುಡುಕಾಟ ನಡೆಸಿದ್ದಾರೆ.  ಆತ ಓದುವ ಪುಸ್ತಕಗಳು,  ಮತ್ತು ಅಂತರ್ಜಾಲದಲ್ಲಿ ಭೇಟಿ ನೀಡಿದ  ಸೈಟುಗಳ ಬಗೆಗೆ ಮಾಹಿತಿ ಕಲೆಹಾಕಿದ್ದಾರೆ.

ಬಂಧಿತ ರಿಯಾಜ್ ಟೋಪಿಯ ವ್ಯಾಪಾರಿಯಾಗಿದ್ದು ಸುಗಂಧ ದ್ರವ್ಯಗಳು ಮತ್ತು ಇತರ ವಿದೇಶಿ ಸಾಮಗ್ರಿಗಳನ್ನು ಬಳಸುತ್ತಿದ್ದ. ಸೋಶಿಯಲ್ ಮೀಡಿಯಾದಲ್ಲಿ ಸದಾ ಕಾಲ ಕಳೆಯುತ್ತಿದ್ದ ಎಂದು ಹೇಳಲಾಗಿದೆ.