ನವದೆಹಲಿ/ತಿರುವನಂತಪುರಂ(ಅ.6): ಫ್ರಾನ್ಸ್'ನ ನೀಸ್‌ನಲ್ಲಿ ಐಎಸ್ ಉಗ್ರರು ಸಾವಿರಾರು ಮಂದಿ ಮೇಲೆ ಟ್ರಕ್ ಹರಿಸಿ 86 ಮಂದಿ ಸಾವಿಗೆ ಕಾರಣವಾದ ಘಟನೆ ವಿಶ್ವಾದ್ಯಂತ ವರದಿಯಾಗಿತ್ತು. ಅದೇ ಮಾದರಿಯ ದಾಳಿಯನ್ನು ಕೇರಳದಲ್ಲೂ ನಡೆಸಲು ಗುಂಪೊಂದು ನಿರ್ಧರಿಸಿತ್ತೆಂಬ ಘಟನೆ ಬೆಳಕಿಗೆ ಬಂದಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಎರಡು ದಿನಗಳ ಹಿಂದೆ ಕೇರಳದಲ್ಲಿ ಬಂಸಿದ್ದ ಏಳು ಮಂದಿ ಯುವಕರ ವಿಚಾರಣೆ ವೇಳೆ ಈ ಅಂಶ ಬಹಿರಂಗವಾಗಿದೆ. ಕಳೆದ ತಿಂಗಳು ಕೊಚ್ಚಿಯಲ್ಲಿ ಆಯೋಜಿಸಲಾಗಿದ್ದ ಸರ್ವ ಧರ್ಮೀಯ ಜಮಾತ್-ಇ-ಇಸ್ಲಾಮಿ ಸಮ್ಮೇಳನದಲ್ಲಿ ಈ ಕೃತ್ಯ ಎಸಗಲು ಮುಂದಾಗಿದ್ದರು. ಇಷ್ಟು ಮಾತ್ರವಲ್ಲದೆ ಈ ಗುಂಪು ಕೇರಳ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳು, ಆರ್‌ಎಸ್‌ಎಸ್‌ನ ಹಿರಿಯ ನಾಯಕರು ಮತ್ತು ಇತರರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲೂ ಯೋಜನೆ ರೂಪಿಸಿದ್ದರು. ಕೊಯಮತ್ತೂರು, ತಿರುನಲ್ವೇಲಿಯಿಂದಲೂ ಕ್ರಮವಾಗಿ ನಾಲ್ವರು ಮತ್ತು ವ್ಯಕ್ತಿಯೊಬ್ಬನನ್ನು ಎನ್‌ಐಎ ಬಂಸಿ ವಿಚಾರಣೆಗೆ ಒಳಪಡಿಸಿದೆ ಎಂದು ‘ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.