ಸಿಲಿಕಾನ್ ಸಿಟಿ ಬೆಂಗಳೂರಿನ ಮಂತ್ರಿ ಮಾಲ್ ಸದ್ಯಕ್ಕೆ ಓಪನ್ ಆಗಲ್ಲ. ಮಂತ್ರಿ ಮಾಲ್ ಗೋಡೆ ಕುಸಿದ ಹಿನ್ನೆಲೆಯಲ್ಲಿ ‌ಕಟ್ಟಡ ಅವಶೇಷ ಪರಿಶೀಲನೆ ನಡೆಸಿದ್ದು ದೃಢತೆ ಪತ್ರವನ್ನು ಮತ್ತೊಮ್ಮೆ ಪರಿಶೀಲನೆ ಮಾಡಲಾಗುವುದು ಎಂದು ಬಿಬಿಎಂಪಿ ಹೇಳಿದೆ.
ಬೆಂಗಳೂರು (ಫೆ.02): ಸಿಲಿಕಾನ್ ಸಿಟಿ ಬೆಂಗಳೂರಿನ ಮಂತ್ರಿ ಮಾಲ್ ಸದ್ಯಕ್ಕೆ ಓಪನ್ ಆಗಲ್ಲ. ಮಂತ್ರಿ ಮಾಲ್ ಗೋಡೆ ಕುಸಿದ ಹಿನ್ನೆಲೆಯಲ್ಲಿ ಕಟ್ಟಡ ಅವಶೇಷ ಪರಿಶೀಲನೆ ನಡೆಸಿದ್ದು ದೃಢತೆ ಪತ್ರವನ್ನು ಮತ್ತೊಮ್ಮೆ ಪರಿಶೀಲನೆ ಮಾಡಲಾಗುವುದು ಎಂದು ಬಿಬಿಎಂಪಿ ಹೇಳಿದೆ.
ಮಂತ್ರಿ ಮಾಲ್ ಗೋಡೆ ಕುಸಿತ ಪ್ರಕರಣ ಹಿನ್ನೆಲೆಯಲ್ಲಿ ತಜ್ಞರ ತಂಡ ಇಂದು ವರದಿ ಸಲ್ಲಿಕೆ ಮಾಡಿತು. ಈ ಸಂಬಂಧ ಕಮೀಷನರ್ ಮಂಜುನಾಥ್ ಪ್ರಸಾದ್ ಮಾತನಾಡಿ , ಮಾಲ್ ಕಟ್ಟಡದ ದೃಢತೆಯನ್ನ ಮರು ಪರಿಶೀಲನೆ ನಿರ್ಧಾರವನ್ನ ಹೊರಹಾಕಿದರು.
ಸದ್ಯ ತಜ್ಞರು ನೀಡಿರೊ ವರದಿ ಪ್ರಕಾರ ಕ್ಯಾಂಟೀನ್ ಗೋಡೆಯಲ್ಲಿ ಚಿಲ್ಲರ್ಸ್ ವಾಟರ್ ಲೀಕೇಜ್ ಆಗಿದೆ. ಕ್ಯಾಂಟೀನ್ ಗೋಡೆಗೆ ಮೇಲೆ ಲೋಡ್ ಜಾಸ್ತಿಯಾಗಿ ಗೋಡೆ ಕುಸಿತವಾಗಿದೆ ಎಂದು ಗೋಡೆ ಪರಿಶೀಲಿಸಿದ್ದ ತಜ್ಞರ ತಂಡ ಮಾಲ್ ದೋಷವನ್ನ ಬಿಚ್ಚಿಟ್ಟರು. ಈ ಪ್ರಕಾರ ಸದ್ಯ ಮಂತ್ರಿ ಮಾಲ್ ಮತ್ತೆ ಅಕ್ಯೂಪಿಕೇಷನ್ ಪ್ರಮಾಣಪತ್ರ ಪಡೆಯಬೇಕಾದ್ರೆ ಮಾಲ್ನ 1.22 ಲಕ್ಷ ಚದರು ಮೀಟರ್ ಗುಣಮಟ್ಟದ ಬಗ್ಗೆ ದೃಢೀಕರಣ ಮಾಡಬೇಕೆಂದು ಸ್ಪಷ್ಟಪಡಿಸಿದರು..
ಮಂಜುನಾಥ್ ಪ್ರಸಾದ್ ಹೇಳಿದ್ದೇನು?
ಸದ್ಯ ಪಾಲಿಕೆ ತಜ್ಞರ ತಂಡ 47 ಪುಟಗಳ ವರದಿಯನ್ನ ಸಲ್ಲಿಕೆ ಮಾಡಿದೆ. ಈ ವರದಿಯಲ್ಲಿ ನೀಡಿರೊ ಶಿಫಾರಸ್ಸಿನಂತೆ ಗೋಡೆ ಕುಸಿತದ ಭಾಗವನ್ನ ಮತ್ತೊಮ್ಮೆ ಸದೃಢಗೊಳಿಸಬೇಕಿದೆ. ಜತೆಗೆ ಇಡೀ ಕಟ್ಟಡ ದೃಡತೆ ಬಗ್ಗೆ ವರದಿ ಬೇಕಾಗಿದೆ. ಆದರೆ ಈ ಬಾರಿ ಖುದ್ದು ಮಂತ್ರಿಮಾಲ್ ಕಟ್ಟಡ ಬಗ್ಗೆ ಪರೀಕ್ಷೆ ಮಾಡಿಸಲಿದೆ. ಈ ವರದಿಯನ್ನ ಪಡೆದ ನಂತರ ಪಾಲಿಕೆ ಅಧಿಕಾರಿಗಳು , ತಜ್ಞರು ಮರು ಪರಿಶೀಲನೆಯನ್ನ ಮಾಡಲಿದ್ದಾರೆ. ಸದ್ಯಕ್ಕಂತೂ ಬಿಬಿಎಂಪಿ ತೇಪೆ ಹಾಕುವ ವರದಿ ನೀಡಿದೆ. ಈ ವರದಿ ಪ್ರತಿಯನ್ನ ಸರ್ಕಾರಕ್ಕೆ ನೀಡಿದ ನಂತರವಷ್ಟೇ ಸಾರ್ವಜನಿಕರಿಗೆ ವೆಬ್ ಸೈಟ್ ಮೂಲಕ ಹಾಕಲಾಗುತ್ತದೆ ಎಂದು ಕಮೀಷನರ್ ಹೇಳಿದ್ದಾರೆ. ಈ ಪ್ರಕಾರ ಮುಂದಿನ ಒಂದು ತಿಂಗಳು ಮಂತ್ರಿ ಮಾಲ್ ತೆರೆಯೊದು ಅನುಮಾಣ
