ಬೆಂಗಳೂರು (ಸೆ.30): ಸುಪ್ರೀಂ ಕೋರ್ಟ್ ಆದೇಶದಿಂದ ಸಿದ್ದರಾಮಯ್ಯ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ.

ಹೀಗಾಗಿ ನಿರ್ವಹಣಾ ಮಂಡಳಿ ರಚನೆ ಅಧಿಕಾರ ದ್ವಿಸದಸ್ಯ ಪೀಠಕ್ಕೆ ಇಲ್ಲ ಎಂದು ವಾದಿಸಿರುವ ಕರ್ನಾಟಕ, ಸುಪ್ರೀಂ ಆದೇಶ ಪ್ರಶ್ನಿಸಿ ಸಂವಿಧಾನ ಪೀಠಕ್ಕೆ ಹೋಗಲು ಚಿಂತನೆ ನಡೆಸುತ್ತಿದೆ.

ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಪೀಠ ಬದಲಾವಣೆ ಮನವಿಗೆ ಚಿಂತನೆ ನಡೆಸಲಾಗುತ್ತಿದೆ.

ಇದಲ್ಲದೆ ನಾಳೆ ಮಧ್ಯಾಹ್ನ 2 ಗಂಟೆಗೆ ಸರ್ವ ಪಕ್ಷ ಸಭೆ ಕರೆಯಲಾಗಿದ್ದು, ಮುಂದಿನ ನಡೆ ಏನು ಎಂಬುದರ ಚರ್ಚೆ ನಡೆಸಲಾಗುವುದು.

ನೀರು ಬಿಡದಿದ್ದರೆ ನ್ಯಾಯಾಂಗ ನಿಂದನೆ, ನೀರು ಬಿಟ್ಟರೆ ಸದನ ನಿರ್ಣಯ ಉಲ್ಲಂಘನೆ. ಇವೆರಡರ ಮಧ್ಯೆ ಸರ್ಕಾರ ಸಿಲುಕಿದೆ.