ಮೊದಲೇ ರೆಕಾರ್ಡ್ ಆದ ಸುದ್ದಿ ಬಿತ್ತರವಾದ ಬಳಿಕ ಇನ್ಯಾವುದೋ ಯೋಚನೆಯಲ್ಲಿದ್ದ ನತಾಷ ತಕ್ಷಣ ತಬ್ಬಿಬ್ಬಾದರು.
ಲಂಡನ್(ಏ.10): ಮಹಿಳಾ ವಾರ್ತಾ ನಿರೂಪಕಿಯೊಬ್ಬರು ಸುದ್ದಿ ವಾಚನ ಮಾಡುತ್ತಿದ್ದ ವೇಳೆ ಹಗಲು ಕನಸು ಕಂಡ ವಿಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್'ಆಗಿ ಹರಿದಾಡುತ್ತಿದೆ.
ಲಂಡನ್ನಿನ ಪ್ರತಷ್ಟಿತ ಎಬಿಸಿ ಸುದ್ದಿವಾಹಿನಿಯ ನತಾಷಾ ಎಕ್ಲಬೈ ಎಂಬಾಕೆಯೇ ಹಗಲು ಕನಸು ಕಂಡ ನಿರೂಪಕಿಯೆಂದು ಮಿರರ್ ವಾಚ್ ವರದಿ ಮಾಡಿದೆ. ಕ್ರೀಡೆಗೆ ಸಂಬಂಧಿಸಿದ ಸುದ್ದಿವಾಚಿಸುವಾಗ ಈ ಅಚಾತುರ್ಯ ನಡೆದಿದೆ.
ಮೊದಲೇ ರೆಕಾರ್ಡ್ ಆದ ಸುದ್ದಿ ಬಿತ್ತರವಾದ ಬಳಿಕ ಇನ್ಯಾವುದೋ ಯೋಚನೆಯಲ್ಲಿದ್ದ ನತಾಷ ತಕ್ಷಣ ತಬ್ಬಿಬ್ಬಾದರು. ಆದರೂ ವರದಿಗಾರಿಕೆಯಲ್ಲಿ 15 ವರ್ಷ ಅನುಭವವಿರುವ ನತಾಷ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾದರು.
ಕೇವಲ 12 ಸೆಕೆಂಡ್'ಗಳಿರುವ ಈ ವಿಡಿಯೋವನ್ನು ಎರಡು ದಿನಗಳೊಳಗಾಗಿ ಟ್ವಿಟ್ಟರ್ ಹಾಗೂ ಫೇಸ್'ಬುಕ್'ನಲ್ಲಿ ಸುಮಾರು 84 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
