Asianet Suvarna News Asianet Suvarna News

ಪರಿಸರ ಸಂರಕ್ಷಣೆಗಾಗಿ ಹೊಸ ಐಡಿಯಾ: ಮಣ್ಣಿನ ಉಂಡೆಯಲ್ಲಿ ಸಸಿ ನೆಟ್ಟು ಪೋಷಣೆ

ಸಮಾಜಕ್ಕೆ ಏನೋ ಮಾಡಬೇಕು ಅನ್ನೋ ತುಡಿತವೊಂದಿದ್ದರೆ ಸಾಕು ಅದನ್ನು ಸಾಕಾರ ಮಾಡಲು ಸಾವಿರ ದಾರಿಗಳಿರುತ್ತವೆ. ಪರಿಸರವನ್ನು ರಕ್ಷಿಸಬೇಕು ಅಂತ ಎಲ್ಲರೂ ಹೇಳೋರೆ. ಅದನ್ನು ಎಷ್ಟು ಜನ ಮಾಡುತ್ತಾರೆ ಅಂತ ಮಾತ್ರ ಗೊತ್ತಿಲ್ಲ. ಆದರೆ ಗದಗ ಜಿಲ್ಲೆ ಈ ಶಾಲಾ ಮಕ್ಕಳು ಮಾತ್ರ ಪರಿಸರ ರಕ್ಷಣೆಗೆ ಹೊಸ ಐಡಿಯಾನೇ ಮಾಡಿದ್ದಾರೆ.

New Way To Save Environment

ಗದಗ(ಜು.09): ಸಮಾಜಕ್ಕೆ ಏನೋ ಮಾಡಬೇಕು ಅನ್ನೋ ತುಡಿತವೊಂದಿದ್ದರೆ ಸಾಕು ಅದನ್ನು ಸಾಕಾರ ಮಾಡಲು ಸಾವಿರ ದಾರಿಗಳಿರುತ್ತವೆ. ಪರಿಸರವನ್ನು ರಕ್ಷಿಸಬೇಕು ಅಂತ ಎಲ್ಲರೂ ಹೇಳೋರೆ. ಅದನ್ನು ಎಷ್ಟು ಜನ ಮಾಡುತ್ತಾರೆ ಅಂತ ಮಾತ್ರ ಗೊತ್ತಿಲ್ಲ. ಆದರೆ ಗದಗ ಜಿಲ್ಲೆ ಈ ಶಾಲಾ ಮಕ್ಕಳು ಮಾತ್ರ ಪರಿಸರ ರಕ್ಷಣೆಗೆ ಹೊಸ ಐಡಿಯಾನೇ ಮಾಡಿದ್ದಾರೆ.

ಗದಗದ ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಪ್ರೌಢಶಾಲಾ ಮಕ್ಕಳು ಪರಿಸರ ಬೆಳಸಲು ಹೊಸ ಹಾದಿ ಹಿಡಿದಿದ್ದಾರೆ. ತೋಂಟದ ಸಿದ್ದಲಿಂಗ ಮಹಾಸ್ವಾಮಿಜಿಗಳ ಮಾರ್ಗದರ್ಶನದಂತೆ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರಣ್ಯ ಸಂಪತ್ತು ಬೆಳೆಸುವ ಉದ್ದೇಶದಿಂದ ಮಣ್ಣಿನ ಉಂಡೆಗಳನ್ನು ಮಾಡಿದ್ದಾರೆ. ಈ ಉಂಡೆಗಳಿಗೆ ಸೀಡ್ಸ್ ಬಾಲ್ ಎಂದು ಹೆಸರಿಟ್ಟಿದ್ದಾರೆ.

ಅಷ್ಟಕ್ಕೂ ಈ ಸೀಡ್ಸ್​ ಬಾಲ್​​ ಅನ್ನು ಹೇಗೆ ಮಾಡುತ್ತಾರೆ ಗೊತ್ತಾ. ಫಲವತ್ತಾದ ಕೆಂಪು, ಕಪ್ಪು ಮಣ್ಣಿಗೆ ನೀರು, ಗೊಬ್ಬರವನ್ನು ಮಿಶ್ರಣ ಮಾಡ್ತಾರೆ. ಮಣ್ಣನ್ನು ಹದಮಾಡಿ ಅದರಲ್ಲಿ ಹೊಂಗೆ, ಶ್ರೀಗಂಧ, ಬೇವು ಸೇರಿದಂತೆ ಅನೇಕ ಮರಗಳ ಬೀಜಗಳನ್ನು ಹಾಕಿ ಉಂಡೆ  ಮಾಡ್ತಾರೆ. ಈ ಉಂಡೆಗಳನ್ನು ನೆರಳಲ್ಲಿ ಒಣಗಿಸಿ, ಸ್ವಲ್ಪ ಮಳೆಯಾದ ಬಳಿಕ ರಸ್ತೆ ಅಕ್ಕ-ಪಕ್ಕ, ಗುಡ್ಡ, ಬೆಟ್ಟ, ಅರಣ್ಯ ಭಾಗದಲ್ಲಿ ನೆಲ ಅಗೆದು ಉಂಡೆಗಳನ್ನಿಟ್ಟು ಮುಚ್ಚುತ್ತಾರೆ. ಮಣ್ಣಲ್ಲಿರುವ ಬೀಜಗಳು ಮೊಳಕೆಯಾಗಿ, ಸಸಿಗಳಾಗಿ, ಮರಗಳಾಗುತ್ತವೆ. 

ಉದ್ದೇಶ ಒಳ್ಳೆಯದಿದ್ದರೆ ಉಪಾಯಗಳು ಹತ್ತು ಹಲವು ಅನ್ನೋದಕ್ಕೆ ಇದೆ ಸಾಕ್ಷಿ. ಪರಿಸರ ಕಾಳಜಿಯನ್ನು ಹೀಗೂ ಮಾಡಬಹುದು ಅಂತ ತೋರಿಸಿಕೊಟ್ಟಿರುವ ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಮಕ್ಕಳು ಎಲ್ಲರಿಗೂ ಮಾದರಿಯೇ ಸರಿ.

 

Follow Us:
Download App:
  • android
  • ios