ಆತ್ಮಹತ್ಯೆಗೆ ಶರಣಾದ ಶೃತಿಗೌಡ ಜೊತೆ ಅಮಿತ್ ಗೌಡ ಅನೈತಿಕ ಸಂಬಂಧ ಇಟ್ಟಿಕೊಂಡಿದ್ದನಂತೆ. ಈ ಸಂಬಂಧ ಶೃತಿಗೌಡ ಮನೆಯಲ್ಲಿ ತಿಳಿದು ಇಬ್ಬರಿಗೂ ಬುದ್ದಿ ವಾದ ಹೇಳಿದ್ದಾರೆ.. ಆದರೆ, ಬುದ್ದಿ ಕಲಿಯದ ಇಬ್ಬರು ತಮ್ಮ ಅನೈತಿಕ ಸಂಬಂಧ ಮುಂದುವರಿಸಿದ್ದರು.. ಶೃತಿಗೌಡ ಮಾವ ಗೋಪಾಲಕೃಷ್ಣ ಆಚಾರ್ಯ ಕಾಲೇಜಿನ ಬಳಿ ಅಮಿತ್ ಗೌಡನಿಗೆ ಗುಂಡಿಕ್ಕಿದ್ದಾನೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಅಮಿತ್‌ಗೌಡನನ್ನು ಶೃತಿ ಗೌಡ ತನ್ನ ಕಾರಿನಲ್ಲೇ ಕರೆತಂದು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಆದರೆ, ಅಮಿತ್ ಗೌಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಇನ್ನೂ ಆಸ್ಪತ್ರೆಗೆ ದಾಖಲಿಸಿದ ಬಳಿಕ ಶೃತಿ ಲಾಡ್ಜ್`ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯ ಸೋಲದೇವನಹಳ್ಳಿ ಪೊಲೀಸರು ಆರೋಪಿ ಗೋಪಾಲಕೃಷ್ಣನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ..
ಬೆಂಗಳೂರು(ಜ.13): ಬೆಂಗಳೂರಿನಲ್ಲಿ ಮುಸ್ಸಂಜೆ ಗುಂಡಿನ ಸದ್ದು ಕೇಳಿಬಂದಿದೆ. ಸೋಲದೇವನಹಳ್ಳಿ ಬಳಿ ಅಡ್ವೋಕೇಟ್ ಅಮಿತ್ ಕೇಶವಮೂರ್ತಿ ಎಂಬುವವರ ಮೇಲೆ ಸಂಜೆ 4 ಗಂಟೆ ವೇಳೆಯಲ್ಲಿ ಗುಂಡಿನ ದಾಳಿ ನಡೆದಿದೆ. ದಾಳಿ ಬಳಿಕ ಅಮಿತ್ ಅವರನ್ನ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಮಿತ್ ಕೇಶವಮೂರ್ತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಸೇರಿಸಿದ್ದ ಶೃತಿಗೌಡ ಸಹ ಸಮೀಪದ ಲಾಡ್ಜ್`ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅನೈತಿಕ ಸಂಬಂಧಕ್ಕೆ ಬಲಿ: ಆತ್ಮಹತ್ಯೆಗೆ ಶರಣಾದ ಶೃತಿಗೌಡ ಜೊತೆ ಅಮಿತ್ ಗೌಡ ಅನೈತಿಕ ಸಂಬಂಧ ಇಟ್ಟಿಕೊಂಡಿದ್ದನಂತೆ. ಈ ಸಂಬಂಧ ಶೃತಿಗೌಡ ಮನೆಯಲ್ಲಿ ತಿಳಿದು ಇಬ್ಬರಿಗೂ ಬುದ್ದಿ ವಾದ ಹೇಳಿದ್ದಾರೆ.. ಆದರೆ, ಬುದ್ದಿ ಕಲಿಯದ ಇಬ್ಬರು ತಮ್ಮ ಅನೈತಿಕ ಸಂಬಂಧ ಮುಂದುವರಿಸಿದ್ದರು.. ಶೃತಿಗೌಡ ಮಾವ ಗೋಪಾಲಕೃಷ್ಣ ಆಚಾರ್ಯ ಕಾಲೇಜಿನ ಬಳಿ ಅಮಿತ್ ಗೌಡನಿಗೆ ಗುಂಡಿಕ್ಕಿದ್ದಾನೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಅಮಿತ್ಗೌಡನನ್ನು ಶೃತಿ ಗೌಡ ತನ್ನ ಕಾರಿನಲ್ಲೇ ಕರೆತಂದು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಆದರೆ, ಅಮಿತ್ ಗೌಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಇನ್ನೂ ಆಸ್ಪತ್ರೆಗೆ ದಾಖಲಿಸಿದ ಬಳಿಕ ಶೃತಿ ಲಾಡ್ಜ್`ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯ ಸೋಲದೇವನಹಳ್ಳಿ ಪೊಲೀಸರು ಆರೋಪಿ ಗೋಪಾಲಕೃಷ್ಣನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ..
