Asianet Suvarna News Asianet Suvarna News

ಜನ್ ಧನ್ ಖಾತೆದಾರರಿಗೆ ಆರ್'ಬಿಐ ಹೊಸ ಸೂಚನೆ!: ಕಪ್ಪು ಹಣ ತಡೆಗೆ ಮತ್ತೊಂದು ಗದಾಪ್ರಹಾರ

ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಜನ್ ಧನ್ ಖಾತೆಗಳಲ್ಲಿನ ವಿತ್ ಡ್ರಾ ಮಿತಿಯನ್ನು 10 ಸಾವಿರ ರು. ಕಡಿತಗೊಳಿಸಿದೆ. ನೋಟು ನಿಷೇಧದ ಬಳಿಕ ಜನ್ ಧನ್ ಖಾತೆಗಳಲ್ಲಿ ಅಪಾರ ಪ್ರಮಾಣದ ಠೇವಣಿ ಹರಿದುಬರುತ್ತಿದ್ದು, ಈ ಪೈಕಿ ಬಹುತೇಕ ಹಣ ಕಪ್ಪುಹಣ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ಆರ್ ಬಿಐ  ಜನ್ ಧನ್ ಖಾತೆಗಳಲ್ಲಿನ ಹಣ ಹಿಂಪಡೆಯುವ ಮಿತಿಗೆ ಕಡಿವಾಣ ಹಾಕಿದ್ದು, ಈ ಖಾತೆಗಳಲ್ಲಿ ತಿಂಗಳಿಗೆ ಗರಿಷ್ಠ 10 ಸಾವಿರ ರು. ನಗದು ಹಣವನ್ನು ಮಾತ್ರ ಹಿಂಪಡೆಯಬಹುದಾಗಿದೆ.

New Rule For Jan Dhan Account Holders

ನವದೆಹಲಿ(ನ.30): ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಜನ್ ಧನ್ ಖಾತೆಗಳಲ್ಲಿನ ವಿತ್ ಡ್ರಾ ಮಿತಿಯನ್ನು 10 ಸಾವಿರ ರು. ಕಡಿತಗೊಳಿಸಿದೆ. ನೋಟು ನಿಷೇಧದ ಬಳಿಕ ಜನ್ ಧನ್ ಖಾತೆಗಳಲ್ಲಿ ಅಪಾರ ಪ್ರಮಾಣದ ಠೇವಣಿ ಹರಿದುಬರುತ್ತಿದ್ದು, ಈ ಪೈಕಿ ಬಹುತೇಕ ಹಣ ಕಪ್ಪುಹಣ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ಆರ್ ಬಿಐ  ಜನ್ ಧನ್ ಖಾತೆಗಳಲ್ಲಿನ ಹಣ ಹಿಂಪಡೆಯುವ ಮಿತಿಗೆ ಕಡಿವಾಣ ಹಾಕಿದ್ದು, ಈ ಖಾತೆಗಳಲ್ಲಿ ತಿಂಗಳಿಗೆ ಗರಿಷ್ಠ 10 ಸಾವಿರ ರು. ನಗದು ಹಣವನ್ನು ಮಾತ್ರ ಹಿಂಪಡೆಯಬಹುದಾಗಿದೆ.

ಈ ಬಗ್ಗೆ ಬುಧವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆರ್ ಬಿಐ ಕೆವೈಸಿ (ನಿಮ್ಮ ಗ್ರಾಹಕರ ತಿಳಿಯಿರಿ) ಆಗಿರುವ ಜನ್ ಧನ್ ಯೋಜನೆಯ ಖಾತೆದಾರರು ಮಾಸಿಕ ಗರಿಷ್ಢ 10 ಸಾವಿರ ರು, ಹಣ ಹಿಂಪಡೆಯಬಹುದಾಗಿದ್ದು, ಕೆವೈಸಿ  ಆಗಿರದ ಖಾತೆಗಳಲ್ಲಿ ತಿಂಗಳಿಗೆ ಗರಿಷ್ಠ 5 ಸಾವಿರ ರು.ಹಣವನ್ನು ಮಾತ್ರ ವಿತ್ ಡ್ರಾ ಮಾಡಬಹುದಾಗಿದೆ ಎಂದು ತಿಳಿಸಿದೆ.

ಪ್ರಮುಖವಾಗಿ ನೋಟು ನಿಷೇಧ ಘೋಷಣೆಯಾದ ನವೆಂಬರ್ 8 ರ.ಬಳಿಕ ಖಾತೆಗಳಿಗೆ ಜಮೆಯಾದ ಹಣಕ್ಕೆ  ಮಾತ್ರ ಈ ನಿಯಮಾವಳಿ ಅನ್ವಯವಾಗುತ್ತದೆ ಎಂದೂ ಆರ್ ಬಿಐ ಸ್ಪಷ್ಟಪಡಿಸಿದೆ. ಜನ್ ಧನ್ ಖಾತೆಯನ್ನು ಹೊಂದಿರುವ ರೈತರು, ಬಡವರು ಮತ್ತು ಸಣ್ಣ ಪ್ರಮಾಣದ ವ್ಯಾಪಾರಸ್ಥರು ಕಾಳಧಿನಕರ ಕಮಿಷನ್ ದಂಧೆಗೆ ಬಲಿಯಾಗದಂತೆ ತಡೆಯಲು ಆರ್ ಬಿಐ ಈ ಮಹತ್ವದ ಕ್ರಮ ಕೈಗೊಂಡಿದೆ ಎಂದು  ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

 

 

Follow Us:
Download App:
  • android
  • ios