Asianet Suvarna News Asianet Suvarna News

ರಿಸರ್ವ್ ಬ್ಯಾಂಕ್’ನಿಂದ ರೂ.500ರ ಹೊಸ ನೋಟುಗಳು ಬಿಡುಗಡೆ

ರಿಸರ್ವ್ ಬ್ಯಾಂಕ್’ನಿಂದ ಶೀಘ್ರದಲ್ಲೇ ರೂ.500ರ ಹೊಸ ನೋಟುಗಳನ್ನು ಬಿಡುಗಡೆ ಮಾಡಲಿದೆ.

New Rs 500 Notes To Have Inset Letter A Says RBI
  • Facebook
  • Twitter
  • Whatsapp

ನವದೆಹಲಿ: ರಿಸರ್ವ್ ಬ್ಯಾಂಕ್’ನಿಂದ ಶೀಘ್ರದಲ್ಲೇ ರೂ.500ರ ಹೊಸ ನೋಟುಗಳನ್ನು ಬಿಡುಗಡೆ ಮಾಡಲಿದೆ. ಈಗ ಚಾಲ್ತಿಯಲ್ಲಿರುವ ಮಹಾತ್ಮಗಾಂಧಿ ಚಿತ್ರವಿರುವ ಹೊಸ ಮಾದರಿಯ ನೋಟುಗಳ ಜೊತೆಗೆ ಈ ನೋಟುಗಳು ಕೂಡಾ ಚಲಾವಣೆಯಲ್ಲಿರುವುವು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.

ಹೊಸ ನೋಟುಗಳಲ್ಲಿ ಸಂಖ್ಯೆಯ ಬಳಿಯಿರುವ ಒಳಮಗ್ಗುಲಿನಲ್ಲಿ ಆಂಗ್ಲ ಭಾಷೆಯ A ಅಕ್ಷರವನ್ನು ಮುದ್ರಿತವಾಗಿರುವುದು, ಇನ್ನುಳಿದಂತೆ ಎಲ್ಲಾ ರೂಪವೈಷಿಷ್ಟ್ಯಗಳು ಎಂದಿನಂತೆ ಇರುವುವು ಎಂದು ಆರ್’ಬಿಐ ಹೇಳಿದೆ.

ರಿಸರ್ವ್ ಬ್ಯಾಂಕ್ ಗವರ್ನರ್ ಡಾ. ಉರ್ಜಿತ್ ಆರ್ ಪಟೇಲ್ ಅವರ ಸಹಿಯಿರುವ ಈ ನೋಟಿನ ಮುದ್ರಣಗೊಂಡಿರುವ ವರ್ಷ 2017 ಆಗಿರುವುದು. ಹಿಂದಿನ ಬದಿಯಲ್ಲಿ ಸ್ವಚ್ಛ ಭಾರತ ಲೋಗೋ ಹಾಗೂ ಕೆಂಪುಕೋಟೆಯ ಚಿತ್ರವಿರುವುದು.   

Follow Us:
Download App:
  • android
  • ios