ಒಂದು ಸಮೀಕ್ಷೆಯ ಪ್ರಕಾರ, ಈ ಪರ್ಯಾಯ ರಸ್ತೆಯಿಂದ ಬಳ್ಳಾರಿ ರಸ್ತೆಯ ಮೇಲೆ ಶೇ.35ರಷ್ಟು ಒತ್ತಡ ಕಡಿಮೆಯಾಗಲಿದೆ ಎನ್ನಲಾಗುತ್ತಿದೆ.
ಬೆಂಗಳೂರು(ಫೆ.11): ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆಯು ಬಹುತೇಕ ಸಿದ್ಧವಾಗಿದ್ದು ಭಾನುವಾರದಂದು ಸಂಚಾರಕ್ಕೆ ಮುಕ್ತವಾಗಲಿದೆ.
ಈ ಮೊದಲು ಬಹುತೇಕ ಮಂದಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲು ಬಳ್ಳಾರಿ ರಸ್ತೆಯನ್ನೇ ಅವಲಂಭಿಸಿದ್ದು, ಇದರಿಂದ ವಾಹನ ದಟ್ಟಣೆ ಹೆಚ್ಚಾಗಿದೆ. ಬೆಂಗಳೂರಿನ ಫೂರ್ವ ಭಾಗದಿಂದ ಬರುವ ವಾಹನಗಳಿಗೆ ಬೇಗೂರು ಗ್ರಾಮದ ಮೂಲಕ ಹಾದುಹೋಗುವ ಪರ್ಯಾಯ ರಸ್ತೆ ನಿರ್ಮಿಸಲಾಗಿದ್ದು, ಕೆಲಸ ಅಂತಿಮ ಹಂತದಲ್ಲಿದೆ.
ಫೆಬ್ರವರಿ 14ರಂದು ಆರಮಭವಾಗಲಿರುವ ಏರೋ ಇಂಡಿಯಾ ಶೋ ಮುನ್ನವೇ ಪರ್ಯಾಯ ರಸ್ತೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹಿತೇಂದ್ರ ಹೇಳಿದ್ದಾರೆ.
ಒಂದು ಸಮೀಕ್ಷೆಯ ಪ್ರಕಾರ, ಈ ಪರ್ಯಾಯ ರಸ್ತೆಯಿಂದ ಬಳ್ಳಾರಿ ರಸ್ತೆಯ ಮೇಲೆ ಶೇ.35ರಷ್ಟು ಒತ್ತಡ ಕಡಿಮೆಯಾಗಲಿದೆ ಎನ್ನಲಾಗುತ್ತಿದೆ. ಇನ್ನು ಕೆಆರ್ ಪುರ ಕಡೆಯಿಂದ ಬರುವ ವಾಹನಗಳು ಹೆಣ್ಣೂರು ಕ್ರಾಸ್ ಮೂಲಕ ಬಾಗಲೂರು, ಮೈಲನಹಳ್ಳಿ, ಬೇಗೂರು ಮೂಲಕ ನೈರುತ್ಯ ಪ್ರವೇಶ ದ್ವಾರದಿಂದ ವಿಮಾನ ನಿಲ್ದಾಣವನ್ನು ಪ್ರವೇಶಿಸಬಹುದು.
