ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷದ ಪ್ರಭಾವ ಎಷ್ಟರ ಮಟ್ಟಿಗೆ  ಇದೆ ಅಂದರೆ ವೀರ್ಯದಾನಿಗಳೂ ಕಮ್ಯುನಿಸ್ಟ್ ಪಕ್ಷಕ್ಕೆ  ನಿಷ್ಠೆ ಹೊಂದಿರಬೇಕು. ಹೌದು, ಕಮ್ಯುನಿಸ್ಟ್ ಸಿದ್ಧಾಂತವನ್ನು ಗರ್ಭದಲ್ಲೇ ಬೆಳೆಸಬೇಕು ಎಂಬ ಸಂದೇಶನ್ನು ರವಾನಿಸಲು ಬೀಜಿಂಗ್‌ನ ಏಕೈಕ ವೀರ್ಯ ಬ್ಯಾಂಕ್ ಆಗಿರುವ ಪೇಕಿಂಗ್ ಯೂನಿವರ್ಸಿಟಿ ಥರ್ಡ್ ಹಾಸ್ಪಿಟಲ್ ವೀರ್ಯದಾನಿಗಳಿಗೆ ಇಂಥದ್ದೊಂದು ನಿಯಮ  ರೂಪಿಸಿದೆ.

ಬೆಂಗಳೂರು (ಏ. 08): ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷದ ಪ್ರಭಾವ ಎಷ್ಟರ ಮಟ್ಟಿಗೆ ಇದೆ ಅಂದರೆ ವೀರ್ಯದಾನಿಗಳೂ ಕಮ್ಯುನಿಸ್ಟ್ ಪಕ್ಷಕ್ಕೆ ನಿಷ್ಠೆ ಹೊಂದಿರಬೇಕು. ಹೌದು, ಕಮ್ಯುನಿಸ್ಟ್ ಸಿದ್ಧಾಂತವನ್ನು ಗರ್ಭದಲ್ಲೇ ಬೆಳೆಸಬೇಕು ಎಂಬ ಸಂದೇಶನ್ನು
ರವಾನಿಸಲು ಬೀಜಿಂಗ್‌ನ ಏಕೈಕ ವೀರ್ಯ ಬ್ಯಾಂಕ್ ಆಗಿರುವ ಪೇಕಿಂಗ್ ಯೂನಿವರ್ಸಿಟಿ ಥರ್ಡ್ ಹಾಸ್ಪಿಟಲ್ ವೀರ್ಯದಾನಿಗಳಿಗೆ ಇಂಥದ್ದೊಂದು ನಿಯಮ ರೂಪಿಸಿದೆ.

Add Asianetnews Kannada as a Preferred SourcegooglePreferred

ಅಲ್ಲದೇ ವೀರ್ಯದಾನಿಗಳು ಆನುವಂಶಿಕ ಅಥವಾ ಸಾಂಕ್ರಾಮಿಕ ಕಾಯಿಲೆಗಳಿಂದ ಹೊರತಾಗಿರುವುದರ ಜೊತೆಗೆ ಬಲವಾದ ಸೈದ್ಧಾಂತಿಕ ಗುಣ ಅಳವಡಿಸಿಕೊಂಡಿರಬೇಕು ಎಂದು ಆಸ್ಪತ್ರೆ ತಿಳಿಸಿದೆ. 2 ಸುತ್ತಿನ ವೈದ್ಯಕೀಯ ಪರೀಕ್ಷೆಯ ಬಳಿಕ ಯಶಸ್ವಿಯಾಗಿ ವೀರ್ಯದಾನ ಮಾಡಿದವರಿಗೆ 58,500 ರು. ನೀಡಲಾಗುವುದು ಎಂದು ಆಸ್ಪತ್ರೆ ಆಮಿಷವೊಡ್ಡಿದೆ.