ಚಿಕ್ಕರಾಯಪ್ಪ,ಜಯಚಂದ್ರ ಮಂಗಳೂರಿನಲ್ಲಿ ಪತ್ತೆಯಾದ ನಂತರ ಚಿಕ್ಕಮಗಳೂರಿನಲ್ಲೂ ಹೊಸ ನೋಟುಗಳು ಪತ್ತೆಯಾಗಿದೆ.
ಸಾಮಾನ್ಯರು ಕೆಲವು ಸಾವಿರಗಳಿಗೆ ಬ್ಯಾಂಕ್ ಹಾಗೂ ಎಟಿಎಂ ಮುಂದೆ ಗಂಟೆಗಟ್ಟಲೆ ಸರದಿ ಸಾಲಿನಲ್ಲೂ ನಿಂತಿರೂ ಹಣ ಸಿಗುತ್ತಿಲ್ಲ ಆದರೆ ಅಧಿಕಾರಿಗಳಿಗೆ ಕಾಳಧನಿಕರಿಗೆ ಸುಲಭವಾಗಿ ಕೋಟಿ,ಕೋಟಿ ಲಕ್ಷ ಲಕ್ಷ ಹಣ ಸಿಗುತ್ತದೆ.
ಚಿಕ್ಕರಾಯಪ್ಪ,ಜಯಚಂದ್ರ ಮಂಗಳೂರಿನಲ್ಲಿ ಪತ್ತೆಯಾದ ನಂತರ ಚಿಕ್ಕಮಗಳೂರಿನಲ್ಲೂ ಹೊಸ ನೋಟುಗಳು ಪತ್ತೆಯಾಗಿದೆ. ಸೂಕ್ತ ದಾಖಲೆ ಇಲ್ಲದೇ ಇರುವ ನೂತನ 2000 ರೂ. ಮುಖಬೆಲೆಯ 46 ಲಕ್ಷ ರೂ. ಗಳನ್ನು ಚಿಕ್ಕಮಗಳೂರು ಜಿಲ್ಲಾ ಅಪರಾಧ ವಿಭಾಗದ ತಂಡದ ಸದಸ್ಯರು ವಶಕ್ಕೆ ತೆಗೆದುಕೊಂಡಿದ್ಧಾರೆ.
ಚಿಕ್ಕಮಗಳೂರು ನಗರದ ಜಯನಗರ ಬಡಾವಣೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು, ಆರೋಪಿಗಳಾದ ಕುಮಾರ್ ಮತ್ತು ಕಿರಣ್ ಎಂಬಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಹಾಸನದಿಂದ ಚಿಕ್ಕಮಗಳೂರು ಕಾರಿ ಆಗಮಿಸುವ ಸಮಯದಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ಕಾರ್ಯಾಚರಣೆ ನಡೆಸಿ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
