ಇನ್ನು 7 ವರ್ಷದಲ್ಲಿ ನಿರ್ಮಾಣವಾಗಲಿರುವ ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಯ ನಗರಾಡಳಿತಕ್ಕೆ ಪ್ರತ್ಯೇಕ ನಿಯಮಗಳನ್ನು ರಚಿಸಲಾಗಿದೆ.
ಅಮರಾವತಿ(ಡಿ.16): ಕೆಲಸ ಮಾಡದ ಜನಪ್ರತಿನಿಧಿಗಳನ್ನು ವಾಪಸು ಕರೆಸಿಕೊಳ್ಳುವ (ರೈಟ್ ಟು ರೀಕಾಲ್) ಹಕ್ಕನ್ನು ಮತದಾರರಿಗೆ ಕೊಡಿ ಎಂಬುದು ಹಳೆಯ ಬೇಡಿಕೆ. ಆದರೆ ಇದು ಭಾರತದಲ್ಲಿ ಈಗಿನ ಮಟ್ಟಿಗಂತೂ ಜಾರಿಯಾಗುವ ಸಾಧ್ಯತೆ ಇಲ್ಲವಾದರೂ ಆಂಧ್ರಪ್ರದೇಶದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ರಾಜಧಾನಿ ಅಮರಾವತಿಯಲ್ಲಿ ಜಾರಿಯಾಗುವ ನಿರೀಕ್ಷೆ ಇದೆ.
ಕಾರಣ, ಇನ್ನು 7 ವರ್ಷದಲ್ಲಿ ನಿರ್ಮಾಣವಾಗಲಿರುವ ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಯ ನಗರಾಡಳಿತಕ್ಕೆ ಪ್ರತ್ಯೇಕ ನಿಯಮಗಳನ್ನು ರಚಿಸಲಾಗಿದೆ.
ಇದರಲ್ಲಿ ಕೆಲಸ ಮಾಡದ ಜನಪ್ರತಿನಿಧಿಗಳು ಮತ್ತು ಸರ್ಕಾರದ ಅಧಿಕಾರಿಗಳನ್ನು ಜನರಿಗೆ `ವಾಪಸ್ ಕರೆಸಿಕೊಳ್ಳುವ' ವಿಶೇಷ ಅಧಿಕಾರ ನೀಡಲು ತೀರ್ಮಾನಿಸಲಾಗಿದೆ. ಆಂಧ್ರಪ್ರದೇಶ ಪ್ರಾದೇಶಿಕ ಅಭಿವೃದ್ಧಿ ಪ್ರಾಕಾರ ಈ ಪೂರ್ವಭಾವಿ ನಿಯಮಗಳನ್ನು ರಚನೆ ಮಾಡಿದ್ದು, ಶುಕ್ರವಾರ ಆರಂಭವಾಗಿರುವ 2 ದಿನಗಳ ಕಾರ್ಯಾಗಾರದಲ್ಲಿ ನಿಯಮಗಳ ಪ್ರತಿ ವಿತರಿಸಲಾಗಿದೆ.
ಈ ವಿಶೇಷಾಕಾರದಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜವಾಬ್ದಾರಿ ಹೆಚ್ಚುವ ನಿರೀಕ್ಷೆ ಹೊಂದಲಾಗಿದೆ.
