ಎಲೆಕ್ಟ್ರಾನಿಕ್ ಮಾದರಿಯಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗ್ರಾಹಕರಿಗಾಗಿ ಆದಾಯ ತೆರಿಗೆ ಇಲಾಖೆಯು ಹೊಸ ಹೆಲ್ಪ್‌ಲೈನ್ ಆರಂಭಿಸಿದೆ. ಹೀಗಾಗಿ ಇನ್ನು ಮುಂದೆ ಗ್ರಾಹಕರು ಟೋಲ್ ಫ್ರೀ ಸಂಖ್ಯೆ 18001030025ಕ್ಕೆ ಕರೆ ಮಾಡಬಹುದು.
ನವದೆಹಲಿ: ಎಲೆಕ್ಟ್ರಾನಿಕ್ ಮಾದರಿಯಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗ್ರಾಹಕರಿಗಾಗಿ ಆದಾಯ ತೆರಿಗೆ ಇಲಾಖೆಯು ಹೊಸ ಹೆಲ್ಪ್ಲೈನ್ ಆರಂಭಿಸಿದೆ. ಹೀಗಾಗಿ ಇನ್ನು ಮುಂದೆ ಗ್ರಾಹಕರು ಟೋಲ್ ಫ್ರೀ ಸಂಖ್ಯೆ 18001030025ಕ್ಕೆ ಕರೆ ಮಾಡಬಹುದು.
ಇದಲ್ಲದೇ 918046122000 ಸಂಖ್ಯೆಗೂ ಕರೆ ಮಾಡಬಹುದು. ಗ್ರಾಹಕರು ಇ- ರಿಟರ್ನ್ಸ್ ಸಲ್ಲಿಕೆ ಕುರಿತ ತಮ್ಮ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಈ ದೂರವಾಣಿ ಸಂಖ್ಯೆ ಬಳಸಬಹುದು ಎಂದು ಆದಾಯ ತೆರಿಗೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆದಾಯ ತೆರಿಗೆಗೆ ಸಂಬಂಧಿಸಿದ ಇತರೆ ದೂರುಗಳ ಕುರಿತು ಮಾಹಿತಿ ಪಡೆಯಲು ಬೇರೆಯದ್ದೇ ಹೆಲ್ಪ್ಲೈನ್ ಸಂಖ್ಯೆಗಳಿವೆ.
