12 ಗಂಟೆಯಲ್ಲಿ ದಿಲ್ಲಿಯಿಂದ ಮುಂಬೈಗೆ ತೆರಳಬಹುದು

news | Saturday, April 7th, 2018
Suvarna Web Desk
Highlights

ನೀವಿನ್ನು  ಈ ಎರಡು ನಗರಗಳಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ರಸ್ತೆ ಪ್ರಯಾಣವನ್ನು ಮಾಡಬಹುದಾಗಿದೆ.  ಮುಂಬೈ ಹಾಗೂ ದಿಲ್ಲಿಗೆ ಕೇವಲ 12 ಗಂಟೆಗಳಲ್ಲಿಯೇ ಪ್ರಯಾಣಿಸಬಹುದಾಗಿದೆ. 

ನವದೆಹಲಿ : ನೀವಿನ್ನು  ಈ ಎರಡು ನಗರಗಳಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ರಸ್ತೆ ಪ್ರಯಾಣವನ್ನು ಮಾಡಬಹುದಾಗಿದೆ.  ಮುಂಬೈ ಹಾಗೂ ದಿಲ್ಲಿಗೆ ಕೇವಲ 12 ಗಂಟೆಗಳಲ್ಲಿಯೇ ಪ್ರಯಾಣಿಸಬಹುದಾಗಿದೆ. 

ಈ 2 ನಗರಗಳ ನಡುವೆ  ಪ್ರಧಾನಿ ನರೇಂದ್ರ ನೇತೃತ್ವದ ಸರ್ಕಾರ  ಗ್ರೀನ್ ಫಿಲ್ಡ್ ಎಕ್ಸ್’ಪ್ರೆಸ್ ವೇ ನಿರ್ಮಾಣ ಮಾಡುತ್ತಿದ್ದು,  ನಿಟ್ಟಿನಲ್ಲಿ ಈ 2 ನಗರಗಳ  ಪ್ರಯಾಣದ ಸಮಯ ಕಡಿಮೆಯಾಗಲಿದೆ.

ಸದ್ಯ  2 ನಗರಗಳಿಗೆ  ರಸ್ತೆ ಮಾರ್ಗದ ಮೂಲಕ ತೆರಳಲು 24 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಹೊಸ ರಸ್ತೆ ನಿರ್ಮಾಣದ ಬಳಿಕ 12 ಗಂಟೆಗಳಲ್ಲಿ ರಾಷ್ಟ್ರ ರಾಜಧಾನಿಯಿಂದ ವಾಣಿಜ್ಯ ನಗರವನ್ನು ತಲುಪಬಹುದಾಗಿದೆ.

ಒಟ್ಟು 4 ಹಂತದಲ್ಲಿ ರಸ್ತೆ ನಿರ್ಮಾಣ ಕಾರ್ಯವನ್ನು ಮಾಡಲಾಗುತ್ತಿದೆ. ಇನ್ನು ಒಂದೂವರೆ ವರ್ಷಗಳಲ್ಲಿ  ರಸ್ತೆ ನಿರ್ಮಾಣ  ಕಾರ್ಯವು ಪೂರ್ಣಗೊಳ್ಳಿದೆ. ಒಟ್ಟು 16 ಸಾವಿರ ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.

Comments 0
Add Comment

    Talloywood New Gossip News

    video | Thursday, April 12th, 2018
    Suvarna Web Desk