ಕಣ್ಣಿಗೆ ಕಾಣುವ ನಿಯಮ ಉಲ್ಲಂಘನೆಯಾದರೆ ಮಾತ್ರ ತಪಾಸಣೆ ಮಾಡಬೇಕು ಎಂದು ಆದೇಶ ನೀಡಿದ್ದಾರೆ.
ಬೆಂಗಳೂರು(ಜ.1): ನೂತನ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಹೊಸ ವರ್ಷಕ್ಕೆ ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ್ದಾರೆ. ಇನ್ನು ಮುಂದೆ ಪೊಲೀಸರು ಎಲ್ಲೆಂದರಲ್ಲಿ ವಾಹನಗಳನ್ನು ಡಿಎಲ್ ತಪಾಸಣೆ ಅಥವಾ ಮುಂತಾದ ವಿಷಯವಾಗಿ ತಡೆಯುವಂತಿಲ್ಲ. ಕಣ್ಣಿಗೆ ಕಾಣುವ ನಿಯಮ ಉಲ್ಲಂಘನೆಯಾದರೆ ಮಾತ್ರ ತಪಾಸಣೆ ಮಾಡಬೇಕು ಎಂದು ಆದೇಶ ನೀಡಿದ್ದಾರೆ. ಈ ಆದೇಶದಿಂದ ಇನ್ನು ಮುಂದೆ ವಾಹನ ಸವಾರರು ಪೊಲೀಸರ ಭಯವಿಲ್ಲದೆ ಸಂಚರಿಸಬಹುದು.ಇದು ಸ್ಕೂಟರ್ ಸವಾರರಿಗೆ ಸಿಕ್ಕ ಬಿಗ್ ರಿಲೀಫ್ ಎಂದೇ ಹೇಳಬಹುದು.
