ಬೆಳಗಾವಿ(ಆ. 14): ಮಾಜಿ ಶಾಸಕ ಅಭಯ ಪಾಟೀಲ್​ ಸೋದರರ ಪುತ್ರ ಪವನ ಪಾಟೀಲ್ ಅವರು​ ವಕೀಲರೊಬ್ಬರಿಗೆ ಧಮ್ಕಿ ಹಾಕಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪವನ ಪಾಟೀಲ್​ ಬೆಳಗಾವಿಯ ವಕೀಲ್​ ಹರ್ಷವರ್ಧನ್​'ಗೆ ಕರೆ ಮಾಡಿ, ನಮ್ಮ ಚಿಕ್ಕಪ್ಪನ ವಿರುದ್ಧ ಮಾತಾಡಿದ್ರೆ ಸುಮ್ಮನೇ ಬಿಡಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಜತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಗಡಿನಾಡಲ್ಲಿ ಮಾಜಿ ಶಾಸಕರ ಸೋದರನ ಪುತ್ರನ ಪುಂಡಾಟ ಹೆಚ್ಚಾಗಿದ್ದು, ಕ್ರಮ ಕೈಗೊಳ್ಳಲು ವಕೀಲ ಹರ್ಷವರ್ಧನ್ ಪಾಟೀಲ್​ ಡಿಸಿಪಿಗೆ ದೂರು ನೀಡಿದ್ದಾರೆ.