ಕಠ್ಮಂಡು :  ಭಾರತದಲ್ಲಿ ನೋಟು ಅಮಾನ್ಯೀಕರಣವಾದ ಬಳಿಕ ಹೊಸದಾಗಿ ಚಲಾವಣೆಗೆ ತಂದ ನೋಟುಗಳನ್ನು ನೇಪಾಳ ಸರ್ಕಾರ ನಿಷೇಧಿಸಿ  ಆದೇಶ ಹೊರಡಿಸಿದೆ.  

ಭಾರತದ ಕರೆನ್ಸಿಯ 100 ರು. ನೋಟೊಂದಕ್ಕೆ ಮಾತ್ರವೇ ಮಾನ್ಯತೆ ನೀಡಲಾಗುತ್ತಿದೆ ಎಂದು ನೇಪಾಳದ ಕಠ್ಮಂಡು ಪೋಸ್ಟ್ ವರದಿ ಮಾಡಿದೆ. 

ನೇಪಾಳ ಸರ್ಕಾರಿ ವಕ್ತಾರ ಹಾಗೂ ಮಾಹಿತಿ ಹಾಗೂ ಸಂವಹನ ಖಾತೆ ಸಚಿವ ಗೋಕುಲ್ ಪ್ರಸಾದ್ ಬಸ್ಕೋಟಾ ಭಾರತದ ನೋಟು ಅಮಾನ್ಯೀಕರಣದ ಬಳಿಕ ಹೊಸದಾಗಿ ಚಲಾವಣೆಗೆ ಬಂದ ನೋಟಯಗಳ ಬ್ಯಾನ್ ಮಾಡಿದ್ದಾಗಿ ಘೋಷಿಸಿದ್ದಾರೆ. 

ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2016ರ ನವೆಂಬರ್ 8 ರಂದು 500 ಹಾಗೂ 1000 ರು. ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿತ್ತು.

ಅದಾದ ಬಳಿಕ ದೇಶದಲ್ಲಿ 200, 500, 2000 ರು. ಮುಖ ಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತರಲಾಗಿತ್ತು.  ನೋಟು ಮಾನ್ಯದ ನಂತರ ಚಲಾವಣೆಗೆ ಬಂದ ಈ ನೋಟುಗಳನ್ನು ನಿಷೇಧ ಮಾಡಿ ಆದೇಶಿಸಲಾಗಿದೆ.   ಇದರಿಂದ ಭಾರತದಿಂದ ನೇಪಾಳಕ್ಕೆ ಕೆಲಸಕ್ಕೆ ತೆರಳಿದ ಕಾರ್ಮಿಕ ವರ್ಗ ಹಾಗೂ ಪ್ರವಾಸಿಗರಿಗೆ ಹೆಚ್ಚಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.