ಜೈಪುರ: ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಅವರು ಕಾಶ್ಮೀರದ ಪಂಡಿತರೇ ಅಲ್ಲ. ಏಕೆಂದರೆ ಅವರು ದನ ಮತ್ತು ಹಂದಿ ಮಾಂಸ ತಿನ್ನುತ್ತಿದ್ದರು ಎಂದು ರಾಜಸ್ತಾನದ ಬಿಜೆಪಿ ಶಾಸಕ ಜ್ಞಾನ ದೇವ ಅಹುಜಾ ದೂರಿದ್ದಾರೆ.

ಕಾಂಗ್ರೆಸ್‌, ನೆಹರು ಹೆಸರಿನ ಮುಂದೆ ಪಂಡಿತ್‌ ಪದವನ್ನು ಸೇರಿಸಿದೆ. ಇಂದಿರಾ ಗಾಂಧಿ ಜೊತೆ ಅವರ ವಂಶದ ಕುಡಿ ಎಂದೂ ದೇವಾಲಯಕ್ಕೆ ಹೋಗಿದ್ದಿಲ್ಲ, ನನ್ನ ಮಾತು ಸುಳ್ಳು ಎಂದು ಯಾರಾದರೂ ನಿರೂಪಿಸಿದರೆ ಅಧಿಕಾರದಿಂದ ಕೆಳಗೆ ಇಳಿಯುವೆ’ ಎಂದು ಕಾಂಗ್ರೆಸ್‌ ಮುಖಂಡ ಸಚಿನ್‌ ಪೈಲಟ್‌ ಮಾತಿಗೆ ಪ್ರತಿಕ್ರಿಯಿಸಿದರು.

ರಾಹುಲ್‌ ಗಾಂಧಿ ತನ್ನ ಅಜ್ಜಿಯಿಂದ ದೇವಾಲಯಗಳಿಗೆ ಹೋಗುವುದನ್ನು ಕಲಿತರು ಎಂದು ಕಾಂಗ್ರೆಸ್‌ ಮುಖ್ಯಸ್ಥ ಸಚಿನ್‌ ಪೈಲಟ್‌ ಹೇಳಿಕೆ ನೀಡಿದ್ದರು.