ಕಾಡೋದೆ ಆಸ್ಪತ್ರೆ ಈ ಪರಿ ಕಾಡೋದೆ?: ಬಾಲಕನ ಮರ್ಮಾಂಗ ಕಟ್!

Negligent Doctor cuts boys genital in Bidar
Highlights

ಕಾಡೋದೆ ಆಸ್ಪತ್ರೆ ಈ ಪರಿ ಕಾಡೋದೆ

ಖಾಸಗಿ ಆಸ್ಪತ್ರೆ ವೈದ್ಯನ ಯಡವಟ್ಟು

ಶಸ್ತ್ರಚಿಕಿತ್ಸೆ ವೇಳೆ ಬಾಲಕನ ಮರ್ಮಾಂಗ್ ಕಟ್

ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಘಟನೆ
 

ಬೀದರ್(ಜೂ.25): ಖಾಸಗಿ ವೈದ್ಯನ ಯಡವಟ್ಟಿಗೆ ಬಾಲಕನೋವರ್ವ ತನ್ನ ಮರ್ಮಾಂಗವನ್ನೇ ಕಳೆದುಕೊಂಡ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ಕಾಡೋದೆ ಕ್ಲಿನಿಕ್‌ನಲ್ಲಿ ಬಾಲಕನಿಗೆ ಶಸ್ತ್ರಚಿಕಿತ್ಸೆ  ಮಾಡಲು ಹೋಗಿ ಆತನ ಮರ್ಮಾಂಗವನ್ನೇ ವೈದ್ಯರು ಕತ್ತರಿಸಿದ್ದಾರೆ.

ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ವೈದ್ಯರಾದ ಮಲ್ಲಿಕಾರ್ಜುನ್ ಕಾಡೋದೆ ನಿರ್ಲಕ್ಷ್ಯತನ ತೋರಿ ತಮ್ಮ ಮಗನ ಮರ್ಮಾಂಗವನ್ನು ಕತ್ತರಿಸಿದ್ದಾರೆ ಎಂದು ಪೋಷಕರಾದ ಗುಂಡಮ್ಮ ಮತ್ತು ದಶರಥ ಆರೋಪಿಸಿದ್ದಾರೆ. ಅಲ್ಲದೇ ಘಟನೆ ಬಳಿಕ ಆಸ್ಪತ್ರೆ ಮುಂದೆ ಬಾಲಕನ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. 

ಇನ್ನು ಕಾಡೋದೆ ಆಸ್ಪತ್ರೆ ಅನಧಿಕೃತವಾಗಿದ್ದು, ವೈದ್ಯ ಮಲ್ಲಿಕಾರ್ಜುನ್ ಕೇವಲ ಬಿಇಎಂಎಸ್ ಪದವಿ ಪಡೆದಿದ್ದಾರೆ ಎನ್ನಲಾಗಿದೆ. ಸದ್ಯ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಮಲ್ಲಿಕಾರ್ಜುನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

loader