ಅನಾರೋಗ್ಯದಿಂದ  ಉರಗ ತಜ್ಞ ಕಾಶಿನಾಥ್ ನೆಗಳೂರು ಮಠ (49) ನಿಧನರಾಗಿದ್ದಾರೆ.

ಬೆಂಗಳೂರು : ಅನಾರೋಗ್ಯದಿಂದ ಉರಗ ತಜ್ಞ ಕಾಶಿನಾಥ್ ನೆಗಳೂರು ಮಠ (49) ನಿಧನರಾಗಿದ್ದಾರೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಮಾಡುಲರ್ ಕಲಾವಿದರಾಗಿ ಕಾರ್ಯನಿರ್ವಹಿಸುತ್ತಿದ್ದ ಕಾಶಿನಾಥ್ ಅವರು ಕಳೆದ ಆರು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ ಅವರನ್ನು ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೂಲತಃ ಹಾವೇರಿ ಜಿಲ್ಲೆ ಗುತ್ತಲ ನಿವಾಸಿಯಾಗಿರುವ ನೆಗಳೂರು ಮಠ ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮದಲ್ಲಿ ಇಂದು ಜರುಗಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಕಲಾವಿದರಾಗಿದ್ದ ನೆಗಳೂರ ಮಠ ಅವರು ಇದುವರೆಗೂ 1000ಕ್ಕೂ ಅಧಿಕ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದರು. ಪರಿಸರ ಪ್ರೇಮಿಯೂ ಆಗಿದ್ದ ಇವರಿಗೆ ಅನೇಕ ಪ್ರಶಸ್ತಿಗಳು ಒಲಿದು ಬಂದಿದ್ದವು.