* ಕೆಲ ಷರತ್ತುಗಳೊಂದಿಗೆ ನೀಲಮಣಿ ರಾಜು ಅವರಿಗೆ ಡಿಜಿ-ಐಜಿಪಿ ಹುದ್ದೆ ನೀಡಲು ಸರಕಾರ ನಿರ್ಧಾರ ಸಾಧ್ಯತೆ* 1983ರ ಬ್ಯಾಚ್'ನ ಐಪಿಎಸ್ ಅಧಿಕಾರಿ ನೀಲಮಣಿ ಎನ್.ರಾಜು ದಕ್ಷತೆಗೆ ಖ್ಯಾತಿ* ಸೇವಾ ಹಿರಿತನದಲ್ಲೂ ನೀಲಮಣಿ ರಾಜು ಪೊಲೀಸ್ ಮಹಾನಿರ್ದೇಶಕಿಯಾಗಲು ಅರ್ಹ* ಹಾಲಿ ಡಿಜಿ-ಐಜಿಪಿ ಆರ್.ಕೆ.ದತ್ತಾ ಅ.31ರಂದು ನಿವೃತ್ತಿ

ಬೆಂಗಳೂರು(ಅ. 26): ರಾಜ್ಯಕ್ಕೆ ಮೊತ್ತಮೊದಲ ಮಹಿಳಾ ಡಿಜಿ ಐಜಿಪಿ ನೇಮಕ ಬಹುತೇಕ ಖಚಿತಗೊಂಡಿದೆ. ಹಿರಿಯ ಐಪಿಎಸ್​ ಅಧಿಕಾರಿ ನೀಲಮಣಿ ಎನ್​.ರಾಜು ಡಿಜಿ-ಐಜಿಪಿ ಹುದ್ದೆಗೆ ನೇಮಕ ಮಾಡಲು ರಾಜ್ಯ ಸರ್ಕಾರ ಮನಸ್ಸು ಮಾಡಿದೆ. ರಾಜ್ಯ ಪೊಲೀಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಡಿಜಿ ಐಜಿಪಿ ಹುದ್ದೆಗೆ ಮಹಿಳೆಯೊಬ್ಬರು ನೇಮಕಗೊಳ್ಳಲಿದ್ದಾರೆ. ರಾಜ್ಯದಲ್ಲಿರುವ ಐಪಿಎಸ್ ಅಧಿಕಾರಿಗಳಲ್ಲಿ ಸೇವಾ ಜೇಷ್ಠತೆಯಲ್ಲಿ ಮೊದಲ ಸ್ಥಾನದಲ್ಲಿರುವ ನೀಲಮಣಿ ಅವರು ಪೊಲೀಸ್ ಇಲಾಖೆಯ ಅತ್ಯುನ್ನತ ಹುದ್ದೆ ಅಲಂಕರಿಸಲಿದ್ದಾರೆ. ಆಗಿರುವ ಡಿಜಿ-ಐಜಿಪಿ ಆರ್.ಕೆ.ದತ್ತಾ ಅವರು ಅ.31ರಂದು ನಿವೃತ್ತರಾಗಲಿದ್ದಾರೆ. ಅದಾದ ಬಳಿಕ ನೂತನ ಪೊಲೀಸ್ ಮಹಾನಿರ್ದೇಶಕರು ಅಧಿಕಾರ ಸ್ವೀಕರಿಸಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

1983ರ ಬ್ಯಾಚ್'​ನ ಐಪಿಎಸ್ ಆಧಿಕಾರಿಯಾಗಿರುವ ನೀಲಮಣಿ ಅವರು ಉ್ತತರ ಪ್ರದೇಶದ ರೂರ್ಕೀಯವರು. ಎಂಎ, ಎಂಫಿಲ್, ಎಂಬಿಎ ಪದವಿಗಳನ್ನೂ ಪಡೆದಿದ್ದಾರೆ. ಇನ್ನು, 1984ರ ಬ್ಯಾಚ್'​ನ ಎಂ.ಎನ್.ರೆಡ್ಡಿ ಹಾಗೂ ಕಿಶೋರ್ ಚಂದ್ರ ಕೂಡ ಡಿಜಿ/ಐಜಿಪಿ ಹುದ್ದೆಯ ರೇಸ್'​ನಲ್ಲಿದ್ದಾರೆ.

ಸದ್ಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿಯಾಗಿರೋ ನೀಲಮಣಿ ಎನ್​. ರಾಜು ಅವರು ಡೊಂಟ್​'ಕೇರ್​​ ನಡವಳಿಕೆಯಿಂದಲೇ ಹೆಸರಾದವರು. 1993ರಿಂದ 1996ರವರೆಗೂ ಕೇಂದ್ರ ಸೇವೆಯಲ್ಲಿದ್ದ ನೀಲಮಣಿ ರಾಜು ಅವರು ದಕ್ಷ ಅಧಿಕಾರಿ ಎಂದೇ ಫೇಮಸ್. ಮೂಲಗಳ ಪ್ರಕಾರ, ನೀಲಮಣಿಯವರನ್ನು ಪೊಲೀಸ್ ಮಹಾನಿರ್ದೇಶಕರನ್ನಾಗಿ ಮಾಡುವುದೆಂದರೆ ಸೆರಗಿನಲ್ಲಿ ಬೆಂಕಿ ಕಟ್ಟಿಕೊಂಡಂತಹ ಭಯ ಸರಕಾರಕ್ಕಿತ್ತು. ಆದರೆ, ಕೆಲ ಷರತ್ತುಗಳನ್ನಿಟ್ಟು ನೀಲಮಣಿಯವರಿಗೆ ಡಿಜಿ-ಐಜಿಪಿ ಹುದ್ದೆ ಕೊಡಲು ನಿರ್ಧರಿಸಲಾಗಿದೆ.