Asianet Suvarna News Asianet Suvarna News

ಅಭಿವ್ಯಕ್ತಿ ಸ್ವಾತಂತ್ರ ಇಲ್ಲದಿರುವ ಸಮಾಜದ ಬಗ್ಗೆ ನಾಚಿಕೆಯಾಗುತ್ತಿದೆ

ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ ಚಿತ್ರಕ್ಕೆ ಸರ್ಟಿಪಿಕೇಟ್ ನೀಡುವುದಕ್ಕೆ ಸೆನ್ಸಾರ್ ಮಂಡಳಿ ನಿರಾಕರಿಸಿರುವುದಕ್ಕೆ ನಿರ್ದೇಶಕಿ ಅಲಂಕೃತ ಶ್ರೀವಾಸ್ತವ ಅಸಮಾಧಾನ ವ್ಯಕ್ತಡಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ ಇಲ್ಲದಿರುವ ಸಮಾಜದ ಒಂದು ಭಾಗವಾಗಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.

Need To Freedom Of Expression Says Lipstic Under My Burkha Director

ಗ್ಲಾಸ್ಗೋ/ಬ್ರಿಟನ್ (ಫೆ.24): ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ ಚಿತ್ರಕ್ಕೆ ಸರ್ಟಿಪಿಕೇಟ್ ನೀಡುವುದಕ್ಕೆ ಸೆನ್ಸಾರ್ ಮಂಡಳಿ ನಿರಾಕರಿಸಿರುವುದಕ್ಕೆ ನಿರ್ದೇಶಕಿ ಅಲಂಕೃತ ಶ್ರೀವಾಸ್ತವ ಅಸಮಾಧಾನ ವ್ಯಕ್ತಡಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ ಿಲ್ಲದಿರುವ ಸಮಾಜದ ಒಂದು ಭಾಗವಾಗಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.

ಇದು ಮಹಿಳೆ ಪ್ರಧಾನ ಕಥೆ ಹಾಗೂ ಗುಟ್ಟುಗಳನ್ನು ಒಳಗೊಂಡಿದೆ.  ಮಹಿಳಾ ದೃಷ್ಟಿಕೋನದಲ್ಲಿ ಸಿಬಿಎಫ್ ಸಿಗೆ ಸಮಸ್ಯೆಯಿದ್ದರೆ ಇದು ನನಗೆ ನೋವುಂಟು ಮಾಡಿದೆ. ಜಗತ್ತೇ ಈ ಚಿತ್ರವನ್ನು ಮೆಚ್ಚಿಕೊಂಡಿರುವಾಗ ಸಿಬಿಎಫ್ ಸಿ ಈ ರೀತಿ ಧೋರಣೆ ತಾಳುವುದು ಅಸಂಬದ್ಧವಾಗಿದೆ. ಯಾವ ಕಾರಣಕ್ಕಾಗಿ ಜನರಿಂದ ಗುರುತಿಸಲ್ಪಟ್ಟಿದೆಯೋ ಅದೇ ಕಾರಣಕ್ಕೆ ಸೆನ್ಸಾರ್ ಮಂಡಳಿ ಸರ್ಟಿಫಿಕೇಟ್ ನೀಡಲು ನಿರಾಕರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಿತ್ರ ನಿರ್ಮಾಪಕ ಪ್ರಕಾಶ್ ಜಾ ಕೂಡಾ ಪ್ರತಿಕ್ರಿಯಿಸಿದ್ದಾರೆ. ಸರಿ ತಪ್ಪುಗಳನ್ನು ತಿಳಿಯುವಷ್ಟು ಭಾರತೀಯ ವೀಕ್ಷಕರು ಪ್ರಬುದ್ಧರು ಎಂದು ಹೇಳಿದ್ದಾರೆ. ರಾಜನೀತಿ, ಜೈ ಗಂಗಾಜಲ್, ಆರಕ್ಷಣ್ ಚಿತ್ರ ಬಿಡುಗಡೆಯಲ್ಲೂ ಇದೇ ಸಮಸ್ಯೆ ಎದುರಾಗಿತ್ತು. ಆಗ ನ್ಯಾಯಾಧೀಕರಣ ಮಂಡಳಿಗೆ ಹೋಗಿದ್ದೆವು. ಈಗಲೂ ಅದರ ಮೊರೆ ಹೋಗುತ್ತೇವೆ ಎಂದು ಪ್ರಕಾಶ್ ಜಾ ಹೇಳಿದ್ದಾರೆ.

Follow Us:
Download App:
  • android
  • ios