5-6 ತಿಂಗಳುಗಳ ಬಳಿಕ ಕೇಂದ್ರ ಸರ್ಕಾರದ ಕ್ರಮದ ಗಂಭೀರವಾದ ದುಷ್ಪರಿಣಾಮಗಳು ಹಣದುಬ್ಬರದ ರೂಪದಲ್ಲಿ ಹೊರಬರಲಿದೆ, ಎಂದು ಸಿಸೋದಿಯಾ ಎಚ್ಚರಿಸಿದ್ದಾರೆ.
ನವದೆಹಲಿ (ನ.14): ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದ ವಿರುದ್ಧ ವಾಗ್ದಾಳಿ ನಡೆಸಿರುವ ದೆಹಲಿ ಉಪ-ಮುಖ್ಯಮಂತ್ರಿ ಮನೀಶ್ ಸಿಸೋದಿಯಾ, ದೇಶದ ಜನರಿಗೆ ಬೇಕಿರುವುದು ಸಮಸ್ಯೆಗಳಿಗೆ ಪರಿಹಾರವೇ ಹೊರತು, ಪ್ರಧಾನಿಯ ಕಣ್ಣೀರು ಅಲ್ಲವೆಂದು ಕಿಡಿಕಾರಿದ್ದಾರೆ.
ಜನರಿಗೆ ಬೇಕಾಗಿರುವುದು ಸಮಸ್ಯೆಗಳಿಗೆ ಪರಿಹಾರ, ಪ್ರಧಾನಿಯ ಕಣ್ಣೀರು ಅಲ್ಲ. ಏಟಿಎಮ್ ಮುಂದೆ ಕ್ಯೂ ನಿಲ್ಲುವುದು ದೊಡ್ಡ ಸಮಸ್ಯೆಯಲ್ಲ, ವ್ಯಾಪಾರ ವಹಿವಾಟುಗಳು ಕುಸಿದಿರುವುದು, ರೈತರಿಗೆ ಕೃಷಿ ಮಾಡಲು ಸಮಸ್ಯೆಯಾಗುತ್ತಿರುವುದು ದೊಡ್ಡ ಸಮಸ್ಯೆ. 5-6 ತಿಂಗಳುಗಳ ಬಳಿಕ ಈ ಕ್ರಮದ ಗಂಭೀರವಾದ ದುಷ್ಪರಿಣಾಮಗಳು ಹಣದುಬ್ಬರದ ರೂಪದಲ್ಲಿ ಹೊರಬರಲಿದೆ, ಎಂದು ಸಿಸೋದಿಯಾ ಹೇಳಿದ್ದಾರೆ.
