ನ.8ರಂದು ನೋಟು ಅಪನಗದೀಕರಣದ ಬಳಿಕ ನ.24ರವರೆಗೂ 500 ಮತ್ತು 2,000 ಮುಖಬೆಲೆಯ ಒಟ್ಟು 11,64,100 ಕೋಟಿ ನೂತನ ನೋಟುಗಳನ್ನು ಆರ್‌ಬಿಐ ವ್ಯವಸ್ಥಿತವಾಗಿ ಚಲಾವಣೆಗೆ ತಂದಿದೆ ಎಂದು ಜೇಟ್ಲಿ ಶುಕ್ರವಾರ ಲೋಕಸಭೆಗೆ ತಿಳಿಸಿದರು.
ನವದೆಹಲಿ(ಮಾ.10): ನೋಟು ಅಪನಗದೀಕರಣದ ಬಳಿಕ ಇದುವರೆಗೂ ಸುಮಾರು 12 ಲಕ್ಷ ಕೋಟಿ ವೌಲ್ಯದ ನೂತನ ನೋಟುಗಳು ದೇಶಾದ್ಯಂತ ಚಲಾವಣೆಯಲ್ಲಿವೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ನ.8ರಂದು ನೋಟು ಅಪನಗದೀಕರಣದ ಬಳಿಕ ನ.24ರವರೆಗೂ 500 ಮತ್ತು 2,000 ಮುಖಬೆಲೆಯ ಒಟ್ಟು 11,64,100 ಕೋಟಿ ನೂತನ ನೋಟುಗಳನ್ನು ಆರ್ಬಿಐ ವ್ಯವಸ್ಥಿತವಾಗಿ ಚಲಾವಣೆಗೆ ತಂದಿದೆ ಎಂದು ಜೇಟ್ಲಿ ಶುಕ್ರವಾರ ಲೋಕಸಭೆಗೆ ತಿಳಿಸಿದರು.
ನೋಟು ಅಪನಗದೀಕರಣದ ಬಳಿಕ ಬ್ಯಾಂಕಿನಲ್ಲಿ ಠೇವಣಿಯಾದ ರದ್ದಾದ 500 ಮತ್ತು 1,000 ಮುಖಬೆಲೆಯ ನೋಟುಗಳಲ್ಲಿನ ನಕಲಿ ನೋಟುಗಳನ್ನು ಬೇರ್ಪಡಿಸುವ ಕಾರ್ಯ ನಡೆಯುತ್ತಿದ್ದು, ಠೇವಣಿಯಾದ ಹಳೆಯ ನೋಟುಗಳ ಪ್ರಮಾಣವನ್ನು ನಿಖರವಾಗಿ ಹೇಳಲಾಗದು ಎಂದು ಅವರು ತಿಳಿಸಿದ್ದಾರೆ.
