ರಸ್ತೆಯಲ್ಲೇ ಕರ್ನಾಟಕ ಉಗ್ರಾಣ ನಿಗಮದ ಗೋದಾಮು ಇದ್ದು, ಇಲ್ಲಿ ದಾಸ್ತಾನು ಇರಿಸಿದ್ದ ಅಕ್ಕಿ, ಗೋದಿಗೆ ಸಿಂಪಡಿಸಿದ್ದ ಕೀಟನಾಶಕ ಗುಂಡಿಯ ನೀರಿಗೆ ಸೇರಿದ್ದು ಅದನ್ನು ಕುರಿಗಳು ಸೇವಿಸಿದ್ದರಿಂದ ಘಟನೆ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಕಲಬುರಗಿ(ಆ.27): ರಾಸಾಯನಿಕ ಮಿಶ್ರಿಯ ನೀರು ಸೇವಿಸಿ ಮೂವತ್ತೈದಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿರುವ ಘಟನೆ ಕಲಬುರಗಿ ಹೊರ ವಲಯದ ನೃಪತುಂಗ ಕಾಲೋನಿಯ ಬಳಿಯ ನಂದೂರ-ಕೆಸರಟಗಿ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ನಡೆದಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರಸ್ತಾಪುರ ಗ್ರಾಮದ ಶರಬಣ್ಣ ಸೈಬಣ್ಣ ಅವರು ಸಂಜೆ ಕೈಗಾರಿಕಾ ಪ್ರದೇಶದ ಮಾರ್ಗವಾಗಿ ತಮ್ಮ ಕುರಿಗಳನ್ನು ಹೊಡೆದುಕೊಂಡು ಬರುತ್ತಿದ್ದರು. ಈ ವೇಳೆ ಗುಂಡಿ ಯೊಂದರಲ್ಲಿ ನಿಂತಿದ್ದ ಮಳೆ ನೀರು ಸೇವಿಸಿ ಸ್ಥಳದಲ್ಲೇ 35ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. ಘಟನಾ ಸ್ಥಳಕ್ಕೆ ವಿವಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ರಸ್ತೆಯಲ್ಲೇ ಕರ್ನಾಟಕ ಉಗ್ರಾಣ ನಿಗಮದ ಗೋದಾಮು ಇದ್ದು, ಇಲ್ಲಿ ದಾಸ್ತಾನು ಇರಿಸಿದ್ದ ಅಕ್ಕಿ, ಗೋದಿಗೆ ಸಿಂಪಡಿಸಿದ್ದ ಕೀಟನಾಶಕ ಗುಂಡಿಯ ನೀರಿಗೆ ಸೇರಿದ್ದು ಅದನ್ನು ಕುರಿಗಳು ಸೇವಿಸಿದ್ದರಿಂದ ಘಟನೆ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.