ಹಿರಿಯ ಪತ್ರಕರ್ತ ರವೀಶ್ ಕುಮಾರ್’ಗೆ ರಾಮನ್ ಮ್ಯಾಗಸ್ಸೇ ಪ್ರಶಸ್ತಿ| ಎನ್‌ಡಿಟಿವಿ ಇಂಡಿಯಾ ಸುದ್ದಿವಾಹಿನಿಯ ಹಿರಿಯ ಕಾರ್ಯಕಾರಿ ಸಂಪಾದಕ ರವೀಶ್ ಕುಮಾರ್| ಇದೇ ತಿಂಗಳ 31ರಂದು ರವಿಶ್ ಕುಮಾರ್’ಗೆ  ಪ್ರಶಸ್ತಿ ಪ್ರದಾನ| ಏಷ್ಯಾ ಖಂಡದ ನೊಬೆಲ್ ಪ್ರಶಸ್ತಿ ಎಂದೇ ಪರಿಗಣಿಸಲ್ಪಡುವ ಪ್ರಶಸ್ತಿ| 

ಮಣಿಲಾ(ಆ.02): ಪ್ರಸಕ್ತ ಸಾಲಿನ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಹಿರಿಯ ಪತ್ರಕರ್ತ, ಎನ್‌ಡಿಟಿವಿ ಇಂಡಿಯಾ ಸುದ್ದಿವಾಹಿನಿಯ ಹಿರಿಯ ಕಾರ್ಯಕಾರಿ ಸಂಪಾದಕ ರವೀಶ್ ಕುಮಾರ್ ಭಾಜನರಾಗಿದ್ದಾರೆ.

Scroll to load tweet…

ಭಾರತದ ಅತ್ಯಂತ ಪ್ರಭಾವಿ ಟಿವಿ ಪತ್ರಕರ್ತರಲ್ಲೊಬ್ಬರಾಗಿರುವ ರವೀಶ್ ಕುಮಾರ್ ಅವರಿಗೆ ಇದೇ ತಿಂಗಳ 31ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಫೌಂಡೇಶನ್ ತಿಳಿಸಿದೆ.

 ಏಷ್ಯಾ ಖಂಡದಲ್ಲಿನ ವಿವಿಧ ಕ್ಷೇತ್ರಗಳ ಸಾಧಿಕರನ್ನು ಗುರುತಿಸಿ ಮ್ಯಾಗಸ್ಸೆ ನಾಗರಿಕ ಪ್ರಶಸ್ತಿ ನೀಡಲಾಗುತ್ತದೆ. ಇದನ್ನು ಏಷ್ಯಾ ಖಂಡದ ನೊಬೆಲ್ ಪ್ರಶಸ್ತಿ ಎಂದೇ ಪರಿಗಣಿಸಲಾಗುತ್ತದೆ. ಪ್ರಸಕ್ತ ಸಾಲಿನ ಮ್ಯಾಗಸ್ಸೇ ಪ್ರಶಸ್ತಿಗೆ ಐವರನ್ನು ಆಯ್ಕೆ ಮಾಡಲಾಗಿದ್ದು, ಅವರಲ್ಲಿ ರವೀಶ್ ಕುಮಾರ್ ಕೂಡ ಒಬ್ಬರು.

Scroll to load tweet…

ಬಿಹಾರ ರಾಜ್ಯದ ಜಿತ್ವಾರ್ಪುರ್ ಗ್ರಾಮದಲ್ಲಿ ಜನಿಸಿದ 44 ವರ್ಷದ ರವೀಶ್ ಕುಮಾರ್, 1996ರಲ್ಲಿ ಎನ್‌ಡಿಟಿವಿ ಸಂಸ್ಥೆಗೆ ಸೇರಿದ್ದರು. ಜಿಲ್ಲಾ ವರದಿಗಾರ ಹುದ್ದೆಯಿಂದ ಪ್ರಾರಂಭವಚಾದ ಅವರ ಪತ್ರಿಕೋದ್ಯಮ ಪಯಣ, ಇಂದು ಕಾರ್ಯಕಾರಿ ಸಂಪಾದಕ ಹುದ್ದೆವರೆಗೆ ಬಂದು ನಿಂತಿದೆ. ರವೀಶ್ ಕುಮಾರ್ ಅವರ ಪ್ರೈಮ್ ಟೈಮ್ ಶೋ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದೆ.