ಎನ್‌ಡಿಟೀವಿಯನ್ನು ಸ್ಪೆ‘ಸ್‌ಜೆಟ್‌ನ ಅಜಯ್ ಸಿಂಗ್ ಖರೀದಿಸಲಿದ್ದು, ಶೇ.40 ಷೇರು ಹೊಂದಲಿದ್ದಾರೆ. ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ಅವರ ಪತ್ನಿ ರಾಧಿಕಾ ರಾಯ್ ಶೇ.20 ಷೇರು ಹೊಂದಲಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ನವದೆಹಲಿ(ಸೆ.23): ಖ್ಯಾತ ಅಂಗ್ಲ ಸುದ್ದಿವಾಹಿನಿ ಎನ್ ಡಿಟೀವಿಯನ್ನು ಸ್ಪೆ‘ಸ್ ಜೆಟ್ ವಿಮಾನಯಾನ ಕಂಪನಿಯ ಮಾಲೀಕ ಅಜಯ್ ಸಿಂಗ್ 600 ಕೋಟಿ ರು.ಗೆ ಖರೀದಿಸಲಿದ್ದಾರೆ ಎಂಬ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ.

ಎನ್‌ಡಿಟೀವಿಯನ್ನು ಸ್ಪೆ‘ಸ್‌ಜೆಟ್‌ನ ಅಜಯ್ ಸಿಂಗ್ ಖರೀದಿಸಲಿದ್ದು, ಶೇ.40 ಷೇರು ಹೊಂದಲಿದ್ದಾರೆ. ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ಅವರ ಪತ್ನಿ ರಾಧಿಕಾ ರಾಯ್ ಶೇ.20 ಷೇರು ಹೊಂದಲಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಇದೇ ವೇಳೆ ಎನ್‌ಡಿಟೀವಿಯ 400 ಕೋಟಿ ರು. ಸಾಲವನ್ನೂ ಅಜಯ್ ಸಿಂಗ್ ಹೊರಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಬಾಂಬೆ ಷೇರುಪೇಟೆಗೆ ಎನ್‌ಡಿಟೀವಿ ಸ್ಪಷ್ಟನೆಯೊಂದನ್ನು ನೀಡಿದ್ದು, ‘ನಾವು ಯಾವುದೇ ಕಂಪನಿಯ ಜತೆ ಮಾರಾಟ ಒಪ್ಪಂದ ಮಾಡಿಕೊಂಡಿಲ್ಲ’ ಎಂದಿದೆ.