ಮೋದಿ ಅವರು 34 ಎನ್‌ಡಿಎ ಅಂಗಪಕ್ಷಗಳಿಗೆ ಸಂಜೆ ಔತಣ ನೀಡಿದರು. ಈ ವೇಳೆ ಮೋದಿ ನಾಯಕತ್ವ ಶ್ಲಾಘಿಸಿದ ಸಭೆ, ಮುಂದಿನ ಮಹಾಚುನಾವಣೆಯನ್ನು ಅವರ ನೇತೃತ್ವದಲ್ಲೇ ಎದುರಿಸುವ ಬಗ್ಗೆ ನಿರ್ಧರಿಸಿತು ಎಂದು ಸಚಿವ ಅರುಣ್‌ ಜೇಟ್ಲಿ ಸುದ್ದಿಗಾರರಿಗೆ ತಿಳಿಸಿದರು.
ನವದೆಹಲಿ: 2019ರ ಲೋಕಸಭೆ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲೇ ಎದುರಿಸುವ ಬಗ್ಗೆ ಎನ್ಡಿಎ ಅಂಗಪಕ್ಷಗಳ ಸಭೆ ಸೋಮವಾರ ನಿರ್ಧರಿಸಿದೆ.
ಮೋದಿ ಅವರು 34 ಎನ್ಡಿಎ ಅಂಗಪಕ್ಷಗಳಿಗೆ ಸಂಜೆ ಔತಣ ನೀಡಿದರು. ಈ ವೇಳೆ ಮೋದಿ ನಾಯಕತ್ವ ಶ್ಲಾಘಿಸಿದ ಸಭೆ, ಮುಂದಿನ ಮಹಾಚುನಾವಣೆಯನ್ನು ಅವರ ನೇತೃತ್ವದಲ್ಲೇ ಎದುರಿಸುವ ಬಗ್ಗೆ ನಿರ್ಧರಿಸಿತು ಎಂದು ಸಚಿವ ಅರುಣ್ ಜೇಟ್ಲಿ ಸುದ್ದಿಗಾರರಿಗೆ ತಿಳಿಸಿದರು.


ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ ಅಜೆಂಡಾದಲ್ಲಿ ಇರಲಿಲ್ಲ ಎಂದು ಜೇಟ್ಲಿ ಹೇಳಿದರು. ಆದರೆ ಮೂಲಗಳ ಪ್ರಕಾರ ಒಮ್ಮತದ ಅಭ್ಯರ್ಥಿಗೆ ಸಭೆ ತೀರ್ಮಾನಿಸಿದೆ ಎಂದು ಗೊತ್ತಾಗಿದೆ.
ಯಾವತ್ತೂ ಮೋದಿ ಟೀಕಿಸುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಸಭೆಗೆ ಬಂದಿದ್ದು ವಿಶೇಷವಾಗಿತ್ತು.
ತಣ್ಣಗಾಯ್ತು ಶಿವಸೇನೆ:
ಈ ಹಿಂದೆ ಶಿವಸೇನೆ ರಾಷ್ಟ್ರಪತಿ ಹುದ್ದೆಗೆ ಕಾಂಗ್ರೆಸ್ಸಿನ ಪ್ರತಿಭಾ ಪಾಟೀಲ್ರನ್ನು ಬೆಂಬಲಿಸಿ ಎನ್ಡಿಎ ವಿರೋಧಿ ನಿಲುವು ತಳೆದಿತ್ತು.
