Asianet Suvarna News Asianet Suvarna News

ಹಿರಿಯ ಕಾಂಗ್ರೆಸ್ ನಾಯಕ ಎನ್.ಡಿ.ತಿವಾರಿ ಬಿಜೆಪಿಗೆ ಸೇರ್ಪಡೆ

91 ವರ್ಷ ಪ್ರಾಯದ ತಿವಾರಿ ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ತಿವಾರಿ, ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ, ಒಂದು ಬಾರಿ ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಹಾಗೂ ರಾಜೀವ್ ಗಾಂಧಿ ಸಂಪುಟದಲ್ಲಿ  ವಿದೇಶಾಂಗ ಸಚಿವರಾಗಿದ್ದರು.

ND Tiwari Joins BJP

ನವದೆಹಲಿ (ಜ.18): ಪಂಚರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪಕ್ಷಾಂತರಗಳು ಕೂಡಾ ಅರಂಭವಾಗಿದೆ.

ಹಿರಿಯ ಕಾಂಗ್ರೆಸ್ ನಾಯಕ ಎನ್.ಡಿ.ತಿವಾರಿ ಹಾಗೂ ಪುತ್ರ ರೋಹಿತ್ ಶೇಖರ್ ಇಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.

91 ವರ್ಷ ಪ್ರಾಯದ ತಿವಾರಿ ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ತಿವಾರಿ, ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ, ಒಂದು ಬಾರಿ ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಹಾಗೂ ರಾಜೀವ್ ಗಾಂಧಿ ಸಂಪುಟದಲ್ಲಿ  ವಿದೇಶಾಂಗ ಸಚಿವರಾಗಿದ್ದರು.

ಆಂಧ್ರ ಪ್ರದೇಶದ ರಾಜ್ಯಪಾಲರಾಗಿದ್ದಾಗ ಅವರ ವಿರುದ್ಧ ಲೈಂಗಿಕ ಹಗರಣ ಆರೋಪ ಕೇಳಿಬಂದಿತ್ತು. ಮೂವರು ಮಹಿಳೆಯರೊಂದಿಗೆ ಹಾಸಿಗೆಯಲ್ಲಿರುವ ದೃಶ್ಯಗಳನ್ನು ಸ್ಥಳೀಯ ಮಾಧ್ಯಮ ಪ್ರಸಾರ ಮಾಡಿತ್ತು. ಬಳಿಕ ದ್ರ ಪೊಲೀಸರು ಆ ಕುರಿತು ದೂರನ್ನು ದಾಖಲಿಸಿಕೊಂಡಿದ್ದರು. ನಂತರ ತಿವಾರಿ ರಾಜ್ಯಪಾಲ ಹುದ್ದೆಗೆ ರಾಜಿನಾಮೆ ನೀಡಿದ್ದರು.

ಈಗ ತಂದೆಯೊಂದಿಗೆ ಬಿಜೆಪಿ ಸೇರಿರುವ ರೋಹಿತ್ ಶೇಖರ್ ಈ ಹಿಂದೆ ತಿವಾರಿಯೇ ತನ್ನ ಜೈವಿಕ-ಪಿತನೆಂದು ಸಾಬೀತುಪಡಿಸುವ ವಿಚಾರವಾಗಿ ಕೋರ್ಟ್ ಮೆಟ್ಟಲೇರಿದ್ದರು.

ಫೆಬ್ರವರಿಯಲ್ಲಿ ಉತ್ತರಾಖಂಡದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ತಿವಾರಿ ಸೇರಪಡೆಯಿಂದ ಬ್ರಾಹ್ಮಣ ಸಮುದಾಯದ ಮತಗಳನ್ನು ಬಾಚಿಕೊಳ್ಳುವ ಲೆಕ್ಕಾಚಾರ ಬಿಜೆಪಿಗಿದೆ.

Follow Us:
Download App:
  • android
  • ios