Asianet Suvarna News Asianet Suvarna News

ಭೂಗಳ್ಳರ ಮೇಲೆ ಕ್ರಮ: ಸ್ಪಷ್ಟನೆ ನೀಡಲು ಎನ್'ಬಿಎಫ್ ಒತ್ತಾಯ

ವಿ.ಬಾಲಸುಬ್ರಣಿಯನ್ ಅಧ್ಯಕ್ಷತೆಯ ಸರ್ಕಾರಿ ಭೂಮಿ ರಕ್ಷಣಾ ಸಮಿತಿ  27 ಸಾವಿರದ 336 ಎಕರೆ ನಗರ ವ್ಯಾಪ್ತಿಯಲ್ಲಿ ಒತ್ತುವರಿ ಆಗಿದೆ ಅಂತಾ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದ್ರೆ ರಾಜ್ಯ ಸರ್ಕಾರ ಮಾತ್ರ 15 ಸಾವಿರದ 833 ಎಕರೆ ಭೂಮಿಯನ್ನು ವಶಕ್ಕೆ ಪಡೆದಿದ್ದೇವೆ ಅಂತಾ ಹೇಳುತ್ತಿದೆ

NBF Insist clarify action on Land Mafia

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡ ಭೂ ಗಳ್ಳರ ಮೇಲೆ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ , ಸರ್ಕಾರ ಸ್ಪಷ್ಟನೆ ನೀಡಬೇಕು ಅಂತ ನಮ್ಮ ಬೆಂಗಳೂರು ಫೌಂಡೇಶನ್ ಒತ್ತಾಯಿಸಿದೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಇಂದು  ಯುನೈಟೆಡ್ ಬೆಂಗಳೂರು ಹಾಗೂ ನಮ್ಮ ಬೆಂಗಳೂರು ಪ್ರತಿಷ್ಠಾನ ಜಂಟಿ ಸುದ್ದಿಗೋಷ್ಠಿ ನಡೆಸಿದ್ರು. ವಿ.ಬಾಲಸುಬ್ರಣಿಯನ್ ಅಧ್ಯಕ್ಷತೆಯ ಸರ್ಕಾರಿ ಭೂಮಿ ರಕ್ಷಣಾ ಸಮಿತಿ  27 ಸಾವಿರದ 336 ಎಕರೆ ನಗರ ವ್ಯಾಪ್ತಿಯಲ್ಲಿ ಒತ್ತುವರಿ ಆಗಿದೆ ಅಂತಾ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದ್ರೆ ರಾಜ್ಯ ಸರ್ಕಾರ ಮಾತ್ರ 15 ಸಾವಿರದ 833 ಎಕರೆ ಭೂಮಿಯನ್ನು ವಶಕ್ಕೆ ಪಡೆದಿದ್ದೇವೆ ಅಂತಾ ಹೇಳುತ್ತಿದೆ.ಈ ಎರಡು ವ್ಯತಿರಿಕ್ತ ಅಂಕಿಅಂಶಗಳು ನಡುವೆ ವತ್ಯಾಸ ಕಂಡು ಬರುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಒತ್ತುವರಿದಾರು, ಭೂಗಳ್ಳರು ಹಾಗೂ ಇವರಿಗೆ ಸಹಕರಿಸಿದ ಅಧಿಕಾರಿಗಳ ಮೇಲೆ ತೆಗೆದುಕೊಂಡ ಕ್ರಮಗಳನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದರು.

Follow Us:
Download App:
  • android
  • ios