ಇಸ್ಲಾಮಾಬಾದ್: 160ಕ್ಕೂ ಹೆಚ್ಚು ಅಮಾಯಕರನ್ನು ಬಲಿ ಪಡೆದುಕೊಂಡ ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಉಗ್ರರ ಕೈವಾಡವಿರುವುದನ್ನು, ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್ ಒಪ್ಪಿಕೊಂಡಿದ್ದಾರೆ. ಆದರೆ, ಶರೀಫ್ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಲಾಗಿದೆ, ಎಂದು ಪಾಕ್ ಪ್ರಧಾನಿ ಶಾಹೀದ್ ಕಾಖಾನ್ ಅಬ್ಬಾಸಿ ಹೇಳಿದ್ದಾರೆ.ರಾಷ್ಟ್ರೀಯ ಭದ್ರತಾ ಸಮಿತಿಯೊಂದಿಗೆ ತುರ್ತು ಸಭೆ ನಡೆಸಿದ ನಂತರ ಹಿರಿಯ ಪತ್ರಕರ್ತರೊಂದಿಗೆ ಮಾತನಾಡಿದ ಅಬ್ಬಾಸಿ, ಶರೀಫ್ 'ನಿರಾಶದಾಯಕ' ಹೇಳಿಕೆ ತಪ್ಪಾಗಿದ್ದು, ತಪ್ಪು ದಾರಿಗೆ ಕರೆದೊಯ್ಯಲಿದೆ, ಎಂದು ಹೇಳಿದ್ದಾರೆ.'ಡಾನ್' ಪತ್ರಿಕೆಗೆ ಶರೀಫ್ ನೀಡಿದ ಸಂದರ್ಶನವೊಂದರಲ್ಲಿ ಪಾಕಿಸ್ತಾನದಲ್ಲಿ ಉಗ್ರ ಸಂಘಟನೆಗಳು ಸಕ್ರಿಯವಾಗಿರುವುದನ್ನು ಒಪ್ಪಿಕೊಂಡಿದ್ದು, ಇಂಥ ದೇಶಾತೀತ ಉಗ್ರರಿಗೆ ಗಡಿ ದಾಟಲು ಅನುವು ಮಾಡಿಕೊಟ್ಟು, ಮುಂಬೈ ದಾಳಿಯಂತ ಕೃತ್ಯ ನಡೆಸಲು ಸರಕಾರದ ನೀತಿಗಳು ಅನುವು ಮಾಡಿಕೊಟ್ಟಿದ್ದೆವು, ಎಂದು ಹೇಳಿದ್ದರು.ಶರೀಫ್ ಅವರೊಂದಿಗೂ ಸಭೆ ನಡೆಸಿದ್ದು, ಪತ್ರಿಕೆಯಲ್ಲಿ ವರದಿಯಾದಂಥ ಯಾವ ಹೇಳಿಕೆಗಳನ್ನು ಅವರು ನೀಡಿಲ್ಲವೆಂದು ಹೇಳಿದ್ದಾರೆ. ಭಾರತದ ಮಾಧ್ಯಮಗಳು ಶರೀಫ್ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ್ದು, ಅದಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲವೆಂದು ಅವರು ಹೇಳಿದ್ದಾರೆ.
ಇಸ್ಲಾಮಾಬಾದ್: 160ಕ್ಕೂ ಹೆಚ್ಚು ಅಮಾಯಕರನ್ನು ಬಲಿ ಪಡೆದುಕೊಂಡ ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಉಗ್ರರ ಕೈವಾಡವಿರುವುದನ್ನು, ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್ ಒಪ್ಪಿಕೊಂಡಿದ್ದಾರೆ. ಆದರೆ, ಶರೀಫ್ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಲಾಗಿದೆ, ಎಂದು ಪಾಕ್ ಪ್ರಧಾನಿ ಶಾಹೀದ್ ಕಾಖಾನ್ ಅಬ್ಬಾಸಿ ಹೇಳಿದ್ದಾರೆ.
ರಾಷ್ಟ್ರೀಯ ಭದ್ರತಾ ಸಮಿತಿಯೊಂದಿಗೆ ತುರ್ತು ಸಭೆ ನಡೆಸಿದ ನಂತರ ಹಿರಿಯ ಪತ್ರಕರ್ತರೊಂದಿಗೆ ಮಾತನಾಡಿದ ಅಬ್ಬಾಸಿ, ಶರೀಫ್ 'ನಿರಾಶದಾಯಕ' ಹೇಳಿಕೆ ತಪ್ಪಾಗಿದ್ದು, ತಪ್ಪು ದಾರಿಗೆ ಕರೆದೊಯ್ಯಲಿದೆ, ಎಂದು ಹೇಳಿದ್ದಾರೆ.
'ಡಾನ್' ಪತ್ರಿಕೆಗೆ ಶರೀಫ್ ನೀಡಿದ ಸಂದರ್ಶನವೊಂದರಲ್ಲಿ ಪಾಕಿಸ್ತಾನದಲ್ಲಿ ಉಗ್ರ ಸಂಘಟನೆಗಳು ಸಕ್ರಿಯವಾಗಿರುವುದನ್ನು ಒಪ್ಪಿಕೊಂಡಿದ್ದು, ಇಂಥ ದೇಶಾತೀತ ಉಗ್ರರಿಗೆ ಗಡಿ ದಾಟಲು ಅನುವು ಮಾಡಿಕೊಟ್ಟು, ಮುಂಬೈ ದಾಳಿಯಂತ ಕೃತ್ಯ ನಡೆಸಲು ಸರಕಾರದ ನೀತಿಗಳು ಅನುವು ಮಾಡಿಕೊಟ್ಟಿದ್ದೆವು, ಎಂದು ಹೇಳಿದ್ದರು.
ಶರೀಫ್ ಅವರೊಂದಿಗೂ ಸಭೆ ನಡೆಸಿದ್ದು, ಪತ್ರಿಕೆಯಲ್ಲಿ ವರದಿಯಾದಂಥ ಯಾವ ಹೇಳಿಕೆಗಳನ್ನು ಅವರು ನೀಡಿಲ್ಲವೆಂದು ಹೇಳಿದ್ದಾರೆ. ಭಾರತದ ಮಾಧ್ಯಮಗಳು ಶರೀಫ್ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ್ದು, ಅದಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲವೆಂದು ಅವರು ಹೇಳಿದ್ದಾರೆ.
