ಪೆಟ್ರೋಲ್‌ ಮತ್ತು ಡೀಸೆಲ್‌ಗಿಂತ ಮೊದಲೇ ನೈಸರ್ಗಿಕ ಅನಿಲ ಮತ್ತು ವೈಮಾನಿಕ ಇಂಧನ(ಎಟಿಎಫ್‌)ವನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಜಿಎಸ್‌ಟಿ ಮಂಡಳಿ ಮುಂದಾಗುವ ಸಾಧ್ಯತೆಯಿದೆ ಎನ್ನಲಾಗಿದೆ.  

ನವದೆಹಲಿ: ದೇಶಾದ್ಯಂತ ದಿನ ದಿನಕ್ಕೆ ಗಗನಕ್ಕೇರುತ್ತಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆಂಬ ಕೂಗು ಕೇಳಿಬರುತ್ತಿದೆ. 

ಆದರೆ, ಪೆಟ್ರೋಲ್‌ ಮತ್ತು ಡೀಸೆಲ್‌ಗಿಂತ ಮೊದಲೇ ನೈಸರ್ಗಿಕ ಅನಿಲ ಮತ್ತು ವೈಮಾನಿಕ ಇಂಧನ(ಎಟಿಎಫ್‌)ವನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಜಿಎಸ್‌ಟಿ ಮಂಡಳಿ ಮುಂದಾಗುವ ಸಾಧ್ಯತೆಯಿದೆ ಎನ್ನಲಾಗಿದೆ. 

ಪ್ರಸ್ತುತ ಸಂದರ್ಭದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದು ತುಸು ಕಷ್ಟಕರವೆಂಬಂತೆ ಕಾಣುತ್ತಿದೆ. ಆದರೆ, ನೈಸರ್ಗಿಕ ಗ್ಯಾಸ್‌ ಮತ್ತು ವಿಮಾನಗಳ ಇಂಧನವಾಗಿರುವ ಎಟಿಎಫ್‌ ಅನ್ನು ಶೀಘ್ರದಲ್ಲೇ ಜಿಎಸ್‌ಟಿಗೆ ತರಲಾಗುತ್ತದೆ ಎಂದು ಜಿಎಸ್‌ಟಿ ಮಂಡಳಿ ಮೂಲಗಳು ಹೇಳಿವೆ.