Asianet Suvarna News Asianet Suvarna News

ರಾಷ್ಟ್ರೀಯ ಪಕ್ಷಗಳಿಗೆ 710 ಕೋಟಿ ರು. ಅನಾಮಧೇಯ ದೇಣಿಗೆ

2016​-17ನೇ ಸಾಲಿನಲ್ಲಿ 7 ರಾಷ್ಟ್ರೀಯ ಪಕ್ಷಗಳು ಒಟ್ಟಾರೆ 1559 ಕೋಟಿ ರು. (20000 ರು. ಗಿಂತ ಮೇಲ್ಪಟ್ಟಮೊತ್ತದ) ದೇಣಿಗೆ ಸಂಗ್ರಹಿಸಿದ್ದು, ಈ ಪೈಕಿ 710 ಕೋಟಿ ರು. ಅನಾಮಧೇಯ ಮೂಲಗಳದ್ದು ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

National parties obtained funds from unknown sources

ನವದೆಹಲಿ: 2016​-17ನೇ ಸಾಲಿನಲ್ಲಿ 7 ರಾಷ್ಟ್ರೀಯ ಪಕ್ಷಗಳು ಒಟ್ಟಾರೆ 1559 ಕೋಟಿ ರು. (20000 ರು. ಗಿಂತ ಮೇಲ್ಪಟ್ಟಮೊತ್ತದ) ದೇಣಿಗೆ ಸಂಗ್ರಹಿಸಿದ್ದು, ಈ ಪೈಕಿ 710 ಕೋಟಿ ರು. ಅನಾಮಧೇಯ ಮೂಲಗಳದ್ದು ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಪ್ರಜಾಪ್ರಭುತ್ವ ಸುಧಾರಣಾ ಸಂಘಟನೆ (ಎಡಿಆರ್‌) ಬಿಡುಗಡೆ ಮಾಡಿರುವ ವರದಿ ಅನ್ವಯ, 7 ರಾಷ್ಟ್ರೀಯ ಪಕ್ಷಗಳು ಘೋಷಿತ ಮೂಲಗಳಿಂದ ಒಟ್ಟಾರೆ 589 ಕೋಟಿ ರು. ದೇಣಿಗೆ ಸಂಗ್ರಹಿಸಿವೆ. ಈ ಪೈಕಿ ಬಿಜೆಪಿಯೊಂದೇ 1194 ಜನರಿಂದ 532 ಕೋಟಿ ರು. ದೇಣಿಗೆ ಪಡೆದಿದೆ. 2ನೇ ಸ್ಥಾನದಲ್ಲಿರುವ ಕಾಂಗ್ರೆಸ್‌ 599 ದೇಣಿಗಳ ಮೂಲಕ 42 ಕೋಟಿ ರು. ಸಂಗ್ರಹಿಸಿದೆ. ಅಚ್ಚರಿಯ ವಿಷಯವೆಂದರೆ ಬಿಜೆಪಿಗೆ ಬಂದಿರುವ ದೇಣಿಗೆಯ ಹಣ, ಇತರೆ ಎಲ್ಲಾ ರಾಷ್ಟ್ರೀಯ ಪಕ್ಷಗಳಿಗೆ ಸಿಕ್ಕ ದೇಣಿಗೆಗಿಂತ 9 ಪಟ್ಟು ಅಧಿಕ. ಇನ್ನು ಬಿಎಸ್ಪಿ ಎಂದಿನಂತೆ ತನಗೆ 20000 ರು. ಮೇಲ್ಪಟ್ಟು ಯಾರೂ ದೇಣಿಗೆ ನೀಡಿಲ್ಲ ಎಂದಿದೆ.

2015-16ರಲ್ಲಿ 7 ರಾಷ್ಟ್ರೀಯ ಪಕ್ಷಗಳು ಘೋಷಿತ ಮೂಲಗಳಿಂದ 102 ಕೋಟಿ ರು. ದೇಣಿಗೆ ಸಂಗ್ರಹಿಸಿದ್ದವು. 2016-17ರಲ್ಲಿ ಅದು 487 ಕೋಟಿ ರು.ನಷ್ಟುಹೆಚ್ಚಾಗಿದೆ. ಈ ಅವಧಿಯಲ್ಲಿ ಬಿಜೆಪಿಯ ದೇಣಿಗೆ 77 ಕೋಟಿ ರು, ಎನ್‌ಸಿಪಿ ದೇಣಿಗೆ 71 ಲಕ್ಷ ರು.

Follow Us:
Download App:
  • android
  • ios