ನವದೆಹಲಿ (ಅ.03): ಭಾರತ ಪಾಕ್ ಮೇಲೆ ಸರ್ಜಿಕಲ್ ದಾಳಿ ನಡೆಸಿದ ನಂತರ ಒಂದಲ್ಲಾ ಒಂದು ರೀತಿ ಪ್ರತಿಕಾರ ತೀರಿಸಿಕೊಳ್ಳಲು ಹೊರಟಿರುವ ಪಾಕ್, ಈಗ ನಮ್ಮ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಮೇಲೆ ಕಣ್ಣು ಹಾಕಿದೆ.

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ವೆಬ್ ಸೈಟನ್ನು ಪಾಕ್ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. “D4RK 4NG31” ಹೆಸರಿನ ಹ್ಯಾಕರ್ ತಂಡ ಈ ಕೆಲಸ ಮಾಡಿದೆ.

ಕಾಶ್ಮೀರದಲ್ಲಿ ಮುಗ್ದ ಜನರನ್ನು ಕೊಂದಿರುವ ಸೇಡಿಗಾಗಿ ನಡೆಸುತ್ತಿರುವ ಸೈಬರ್ ವಾರ್ ಇದು. ಭಾರತ ನಡೆಸಿದ ಸರ್ಜಿಕಲ್ ದಾಳಿಯ ಪ್ರತಿಕಾರವಾಗಿ ನಾವು ಈ ಕೃತ್ಯ ಮಾಡಿದ್ದೇವೆ ಎಂದು ಹ್ಯಾಕರ್ ತಂಡ ಹೇಳಿದೆ.

ವೆಬ್ ಸೈಟ್ ಓಪನ್ ಮಾಡಿದಾಗ ಹಿನ್ನೆಲೆಯಲ್ಲಿ ಪಾಕ್ ರಾಷ್ಟ್ರಗೀತೆ ಕೇಳಿ ಬರುತ್ತಿದೆ ಎನ್ನಲಾಗುತ್ತಿದೆ.