ಇತ್ತೀಚೆಗೆ ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಮದುವೆಯ ವೇಳೆ ವರನ ಅಪೇಕ್ಷೆಯಂತೆ ರಾಷ್ಟ್ರಗೀತೆಯನ್ನು ಹಾಡಿದ ಅಪರೂಪದ ಪ್ರಸಂಗವೊಂದು ಚಿಕ್ಕಮಗಳೂರಿನಲ್ಲಿ ನಡೆಯಿತು.

ಚಿಕ್ಕಮಗಳೂರು (ಮೇ.02): ಇತ್ತೀಚೆಗೆ ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಮದುವೆಯ ವೇಳೆ ವರನ ಅಪೇಕ್ಷೆಯಂತೆ ರಾಷ್ಟ್ರಗೀತೆಯನ್ನು ಹಾಡಿದ ಅಪರೂಪದ ಪ್ರಸಂಗವೊಂದು ಚಿಕ್ಕಮಗಳೂರಿನಲ್ಲಿ ನಡೆಯಿತು.

ಇಲ್ಲಿನ ಮಾರುತಿ ನಗರದ ನಿವಾಸಿ ದಕ್ಷಿಣ ಆಫ್ರಿಕಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಬಿ.ಎಸ್. ಶ್ರೀನಿವಾಸ ರಾಜೇ ಅರಸ್ ಹಾಗೂ ಎಂ. ಸಂತ ಅರಸ್ ಅವರ ವಿವಾಹ ಭಾನುವಾರ ನಡೆದಿತ್ತು. ಈ ವೇಳೆ ಮಂಗಳ ಗೀತೆ ಮುಗಿಯುತ್ತಿದ್ದಂತೆ ಶ್ರೀನಿವಾಸ್ ರಾಷ್ಟ್ರಗೀತೆಯ ಧ್ವನಿ ಮುದ್ರಿಕೆ ಹಾಕುವಂತೆ ಸೂಚಿಸಿದರು. ರಾಷ್ಟ್ರಗೀತೆ ಕೇಳಿ ಬರುತ್ತಿದ್ದಂತೆ ಇಡೀ ಮದುವೆ ಮನೆಯಲ್ಲಿದ್ದವರೆಲ್ಲ ಎಚ್ಚೆತ್ತುಕೊಂಡು ಎದ್ದು ನಿಂತು ಗೌರವ ಸಲ್ಲಿಸಿದರು. ಈ ಅಪರೂಪದ ಪ್ರಸಂಗ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.